ಕಾಡೆಮ್ಮೆ ದಾಳಿಯಿಂದ ರೈತನಿಗೆ ಗಾಯ

ಗುಂಡ್ಲುಪೇಟೆ ತಾಲೂಕಿನ ಕುಂದಕೆರೆ ಗ್ರಾಮದಲ್ಲಿ ಕಾಡೆಮ್ಮೆ ದಾಳಿಯಿಂದ ಗಾಯಗೊಂಡಿರುವ ರೈತ ಪಾಲಾಕ್ಷ.
ಗುಂಡ್ಲುಪೇಟೆ ತಾಲೂಕಿನ ಕುಂದಕೆರೆ ಗ್ರಾಮದಲ್ಲಿ ಕಾಡೆಮ್ಮೆ ದಾಳಿಯಿಂದ ಗಾಯಗೊಂಡಿರುವ ರೈತ ಪಾಲಾಕ್ಷ.
Published on

ಗುಂಡ್ಲುಪೇಟೆ: ಜಮೀನಿಗೆ ಹೋಗಿದ್ದ ರೈತನ ಮೇಲೆ ಕಾಡೆಮ್ಮೆ ದಾಳಿ ನಡೆಸಿ ಗಾಯಗೊಳಿಸಿದೆ.

ಬಂಡೀಪುರ ಕಾಡಂಚಿನ ಕುಂದಕೆರೆ ಗ್ರಾಮದ ನಿವಾಸಿ ಪಾಲಾಕ್ಷ ಗಾಯಗೊಂಡ ರೈತ. ಎಂದಿನಂತೆ ಪಾಲಾಕ್ಷ ಜಮೀನಿಗೆ ತೆರಳಿದ್ದು, ಕಾಡೆಮ್ಮೆ ಏಕಾಏಕಿ ದಾಳಿ ನಡೆಸಿದೆ. ಬಳಿಕ ಅಕ್ಕಪಕ್ಕದ ಜಮೀನುಗಳ ರೈತರು ಕುಂದಕೆರೆ ವಲಯದ ಅರಣ್ಯಾಕಾರಿಗೆ ಮಾಹಿತಿ ನೀಡಿದರೂ ಇಬ್ಬರು ದಿನಗೂಲಿ ನೌಕರರನ್ನು ಹೊರತುಪಡಿಸಿ ಅರಣ್ಯ ಇಲಾಖೆಯ ವಾಹನವಾಗಲಿ ಅಥವಾ ಅಕಾರಿಗಳಾಗಲಿ ಬರಲಿಲ್ಲ. ಕಡೆಗೆ ಗ್ರಾಮಸ್ಥರು ಗಾಯಾಳುವನ್ನು 108 ವಾಹನದ ಮೂಲಕ ಆಸ್ಪತ್ರೆಗೆ ಕರೆದೊಯ್ದರು.

ರೈತ ಮುಖಂಡ ಸಂಪತ್ತು ಮಾತನಾಡಿ, ಅರಣ್ಯ ಇಲಾಖೆ ತನ್ನ ಕರ್ತವ್ಯವನ್ನು ಸಂಪೂರ್ಣ ಮರೆತಿದೆ. ಇದರಿಂದ ಹುಲಿ. ಚಿರತೆ, ಆನೆ, ಕರಡಿಗಳ ಜತೆಗೆ ಈಗ ಕಾಡೆಮ್ಮೆಗಳು ಹೊರಬಂದು ರೈತರ ಮೇಲೆ ದಾಳಿ ಮಾಡುತ್ತಿವೆ. ಕಾಡೆಮ್ಮೆ ದಾಳಿಯಿಂದ ಗಾಯಗೊಂಡ ರೈತನನ್ನು ಆಸ್ಪತ್ರೆಗೆ ಕರೆದೊಯ್ಯಲು ಜೀಪ್ ಕಳುಹಿಸುವ ಬದಲು ಇಬ್ಬರು ವಾಚರ್‌ಗಳನ್ನು ಕಳುಹಿಸಲಾಗಿತ್ತು ಎಂದು ಆಕ್ರೋಶ ವ್ಯಕ್ತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net