ಮಾಲೂರು ಕೃಷಿ ಸಹಕಾರ ಸಂದಿಂದ ರೈತಸ್ನೇಹಿ ಕಾರ್ಯನಿರ್ವಹಣೆ

FotoJet 222
Published on

ಸಂದ ಅಧ್ಯಕ್ಷ ಆರ್​.ಪ್ರಭಾಕರ್​ ಹೇಳಿಕೆ

ಮಾಲೂರು: ಸಹಕಾರ ಸಂಘದಲ್ಲಿ ಜಾತ್ಯತಿತ, ಪಕ್ಷಾತಿತ ಆಡಳಿತ ನಡೆಸಿಕೊಂಡು ಬರಲಾಗುತ್ತಿದೆ ಎಂದುಮಾಲೂರು ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಅಧ್ಯಕ್ಷ ಆರ್​. ಪ್ರಭಾಕರ್​ ತಿಳಿಸಿದರು.

ಪಟ್ಟಣದ ಸಂಘದ ಆವರಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ 2024 &-25 ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿ, ಸಹಕಾರ ಸಂಘಗಳು ಕೇಂದ್ರ ಸರ್ಕಾರದಡಿ ಕಾನೂನು ಬದ್ಧವಾಗಿ ಕಾರ್ಯನಿರ್ವಹಿಸುವುದರಿಂದ ಸಂಘದಲ್ಲಿ ಯಾವುದೇ ಹಣ ದುರುಪಯೋಗವಾಗಲು ಸಾಧ್ಯವಿಲ್ಲ. ಸಂಘದಲ್ಲಿ ರೈತರ ಸಮಸ್ಯೆಗಳಿಗೆ ಸ್ಪಂದಿಸಿ ವ್ಯವಸಾಯಕ್ಕೆ ಬೇಕಾದ ಸಲಕರಣೆಗಳನ್ನು ರಿಯಾಯಿತಿ ದರದಲ್ಲಿ ನೀಡುವುದರೊಂದಿಗೆ ರೈತರ ಸೇವೆ ಮಾಡುವುದೇ ನಮ್ಮ ಉದ್ದೇಶ ಎಂದರು.

ಇಲ್ಲಿಯವರೆಗೂ ರಿಯಾಯಿತಿ ದರದಲ್ಲಿ ರಸಗೊಬ್ಬರ ವಿತರಣೆ ಮಾಡಲಾಗುತ್ತಿದೆ. ಮಹಿಳೆಯರಿಗೆ ಸಾಲ ನೀಡುತ್ತಿದ್ದೇವೆ. ರೈತರ ಕಷ್ಟ ಗಮನಿಸಿ ಸಂಘದ ಮೂಲಕ ಸಾಲ ನೀಡುತ್ತಿದ್ದೇವೆ ಎಂದರು.

ಲಾಭಾಂಶಕ್ಕಾಗಿ ಚಿನ್ನದ ಮೇಲೆ ಸಾಲ ನೀಡುತ್ತಿದ್ದೇವೆ. ಆಡಳಿತಕ್ಕೆ ಬಂದು 5 ವರ್ಷವಾದರೂ ಇಲ್ಲಿಯವರೆಗೆ ಡಿಸಿಸಿ ಬ್ಯಾಂಕ್​ನಿಂದ ಯಾವುದೇ ಸಾಲ ಬಂದಿಲ್ಲ. ಜಿಲ್ಲೆಯಲ್ಲಿ ಡಿಸಿಸಿ ಬ್ಯಾಂಕ್​ ಉತ್ತಮವಾಗಿ ಕಾರ್ಯನಿರ್ವಹಿಸಿದ್ದು, ಈಗ ರಾಜಕೀಯ ಕಾರಣದಿಂದ ಮುಳುಗಿಸಿದ್ದಾರೆ.ಡಿಸಿಸಿ ಬ್ಯಾಂಕ್​ ಹಾಳಾದರೆ ನಮ್ಮಂತಹ ಸಂಘಗಳಿಗೆ ಸಾಲ ಎಲ್ಲಿಂದ ಬರುತ್ತದೆ ಎಂದು ಪ್ರಶ್ನಿಸಿದರು.

ಸಂಘದ ಸಿಇಒ ಎಂ. ಸುಧಾಕರ ಸಿಬ್ಬಂದಿ ಸಿ.ವಿ.ವೆಂಕಟಸ್ವಾಮಿ ಗೌಡ, ಮುಬಾರಕ್​ ಬಾನು, ಪ್ರವಿಣ್​ ಕುಮಾರ್​, ಹರ್ಷಿತಾ, ಡಿ.ಎಂ. ಸುರೇಶ್​ ಕುಮಾರ್​ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net