ರೈತ ಹೋರಾಟಗಾರ ಖಂಡೇಶ್ವರ ನಿಧನ

19 Dwd 1 (Khandeshwar Narendra death news)
Published on

ಧಾರವಾಡ: ತಾಲೂಕಿನ ನರೇಂದ್ರ ಗ್ರಾಮದ ಪ್ರಗತಿಪರ ರೈತರು, ರೈತ ಹೋರಾಟಗಾರ ಖಂಡೇಶ್ವರ ಬಸವಂತಪ್ಪ ನರೇಂದ್ರ (ಈಳಿಗೇರ) (80) ಗುರುವಾರ ವಯೋಸಹಜ ಅನಾರೋಗ್ಯದಿಂದ ನಿಧನ ಹೊಂದಿದರು. ಅವರಿಗೆ ಪತ್ನಿ, ಮೂವರು ಪುತ್ರರು ಇದ್ದಾರೆ.
ಗ್ರಾಮದ ಪ್ರತಿಷ್ಠಿತ ಈಳಿಗೇರ ರೈತ ಕುಟುಂಬದಲ್ಲಿ ಜನಿಸಿದ್ದ ಅವರು ಇಂಜಿನಿಯರಿ0ಗ್ ಪದವೀಧರರಾಗಿದ್ದರು. ಸ್ವತಃ ಕೃಷಿಕರಾಗಿ, ಕೃಷಿ ಮತ್ತು ಕೃಷಿಕರ ಬಗ್ಗೆ ಅಪಾರ ಕಳಕಳಿ ಹೊಂದಿದ್ದ ಅವರು, ರೈತಪರ ಹೋರಾಟಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು. ರೈತ ನಾಯಕರಾದ ಪ್ರೊ. ಎಂ.ಡಿ. ನಂಜು0ಡಸ್ವಾಮಿ, ಬಾಬಾಗೌಡ ಪಾಟೀಲ, ಎಚ್.ಎಸ್. ರುದ್ರಪ್ಪ, ಪುಟ್ಟಣ್ಣಯ್ಯ ಅವರ ಜೊತೆ ರೈತ ಚಳವಳಿಗಳಲ್ಲಿ ಗುರುತಿಸಿಕೊಂಡಿದ್ದರು.
ಧಾರವಾಡ ಗ್ರಾಮೀಣ ವಿಧಾನಸಭಾ ಕ್ಷೇತ್ರದಿಂದ ರೈತ ಸಂಘದ ಅಭ್ಯರ್ಥಿಯಾಗಿ ಸ್ಪಧಿಽಸಿದ್ದರು. 1 ಬಾರಿ ಧಾರವಾಡ ಎಪಿಎಂಸಿ ಸದಸ್ಯರಾಗಿ ಚುನಾಯಿತರಾಗಿದ್ದರು. ಹಲವಾರು ಸಂಘ- ಸಂಸ್ಥೆಗಳ ಜೊತೆ ಸದಾ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net