ರೈತ ಕ್ಷೇತ್ರ ಪಾಠಶಾಲೆ ಕಾರ್ಯಕ್ರಮ

02ALD01
ಅಳವಂಡಿ ಸಮೀಪದ ಬೆಳಗಟ್ಟಿ ಗ್ರಾಮದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಸ್ಥೆ ವತಿಯಿಂದ ನಡೆದ ರೈತರ ತರಬೇತಿ ಕಾರ್ಯಕ್ರಮಕ್ಕೆ ಜ್ಯೋತಿ ಬೆಳಗುವ ಮೂಲಕ ಚಾಲನೆ ನೀಡಲಾಯಿತು. ಸಿಎಚ್‌ಎಸ್‌ಸಿ ಪ್ರಬಂಧಕ ಶಂಕರಗೌಡ ಪಾಟೀಲ, ಕೃಷಿ ಮೇಲ್ವಿಚಾರಕ ಅಶೋಕ, ಪ್ರಮುಖರಾದ ಶರಣಮ್ಮ, ಕಾಶಂಬಿ, ತಾಜುದ್ದೀನ, ನೇತ್ರಾವತಿ, ಹಮೀದಾ, ಸೇವಾ ಪ್ರತ್ರಿನಿಧಿ ಶೋಭಾ ಇದ್ದರು.
Published on

ಅಳವಂಡಿ: ಕೃಷಿ ಯಂತ್ರಧಾರಾ (ಸಿಎಚ್‌ಎಸ್‌ಸಿ) ಕೇಂದ್ರದಲ್ಲಿ ರೈತರಿಗೆ ಕೃಷಿ ಯಂತ್ರೋಪಕರಣಗಳು ಕಡಿಮೆ ದರದಲ್ಲಿ ಬಾಡಿಗೆಗೆ ಸಿಗುತ್ತವೆ ಎಂದು ಸಿಎಚ್‌ಎಸ್‌ಸಿ ಪ್ರಬಂಧಕ ಶಂಕರಗೌಡ ಪಾಟೀಲ ತಿಳಿಸಿದರು.

ಸಮೀಪದ ಬೆಳಗಟ್ಟಿ ಗ್ರಾಮದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಸ್ಥೆ ಬಿ.ಸಿ.ಟ್ರಸ್ಟ್ ನಿಂದ ಹಮ್ಮಿಕೊಂಡ ರೈತ ಕ್ಷೇತ್ರ ಪಾಠಶಾಲೆ ಕಾರ್ಯಕ್ರಮದಲ್ಲಿ ರೈತರ ತರಬೇತಿಗೆ ಇತ್ತಿಚಿಗೆ ಚಾಲನೆ ನೀಡಿ ಮಾತನಾಡಿದರು.

ಸಣ್ಣ, ಮದ್ಯಮ ವರ್ಗದ ರೈತರು ಕೃಷಿ ಯಂತ್ರಧಾರಾ ಕೇಂದ್ರದಲ್ಲಿ ಕೃಷಿಗೆ ಸಂಬಂಧ ಪಟ್ಟ ನೇಗಿಲು, ಹರಗುವ, ಬಿತ್ತನೆ, ಒಕ್ಕಣೆ, ರೋಟಾವೇಟರ್ ಮುಂತಾದ ಸಲಕರಣೆಗಳಿದ್ದು ಅವುಗಳ ಉಪಯೋಗ ಪಡೆಯಿರಿ.

ಕೇಂದ್ರಕ್ಕೆ ಬೇಟಿ ನೀಡಿ ನೊಂದಣಿ ಮಾಡಬೇಕು. ನೊಂದಣಿಗೆ ತಕ್ಕಂತೆ ಸೇವೆ ಲಭ್ಯವಿರುತ್ತದೆ ಎಂದರು.

ಕೃಷಿ ಮೇಲ್ವಿಚಾರಕ ಅಶೋಕ ಮಾತನಾಡಿ, ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟದ ಸದಸ್ಯರಿಗೆ ಕೃಷಿ ಹಾಗೂ ಕೃಷಿ ಪೂರಕ ಚಟುವಟಿಕೆಯಲ್ಲಿ ಭಾಗಿಯಾಗುವಂತೆ ವಿವಿಧ ಕೌಶಲ್ಯ ಹಾಗೂ ಆರ್ಥಿಕವಾಗಿ ಸಬಲರನ್ನಾಗಿ ಮಾಡಲು ತರಬೇತಿಗಳನ್ನು ನೀಡಲಾಗುತ್ತದೆ.

ಜತೆಗೆ ನೀರು ಸಂರಕ್ಷಣೆ, ಮಣ್ಣು ಸಂರಕ್ಷಣೆ, ಅರಣ್ಯ, ತೋಟಗಾರಿಕೆ ಮುಂತಾದವುಗಳ ಬಗ್ಗೆ ತರಬೇತಿ ನೀಡಲಾಗುತ್ತಿದೆ. ಸದಸ್ಯರು ಉಪಯೋಗ ಪಡೆದುಕೊಳ್ಳಿ ಎಂದರು. ಶರಣಮ್ಮ, ಕಾಶಂಬಿ, ತಾಜುದ್ದೀನ, ನೇತ್ರಾವತಿ, ಹಮೀದಾ, ಸೇವಾ ಪ್ರತ್ರಿನಿಧಿ ಶೋಭಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net