

ಜಮಖಂಡಿ (ಬಾಗಲಕೋಟೆ): ಮಹಾರಾಷ್ಟ್ರದ ಕೃಷ್ಣಾ ಕಣಿವೆಯಲ್ಲಿ ಸುರಿಯುತ್ತಿರುವ ಭಾರಿ ಮಳೆಗೆ ನದಿಯಲ್ಲಿ ಅಪಾಯದ ಮಟ್ಟ ಮೀರಿ ನೀರು ಹರಿಯುತ್ತಿದೆ. ತಾಲೂಕಿನ ಆಲಗೂರು ಗ್ರಾಮದ ರೈತನೊಬ್ಬ ಮೇವು ತರಲು ಹೋದಾಗ ನದಿ ನೀರಿನ ರಭಸಕ್ಕೆ ಕೊಚ್ಚಿ ಹೋಗಿರುವುದು ಶನಿವಾರ ಬೆಳಗ್ಗೆ ಬೆಳಕಿಗೆ ಬಂದಿದೆ.
ತಾಲೂಕಿನ ಅಲಗೂರು ಗ್ರಾಮದ ನಿವಾಸಿ, ವೃದ್ಧ ರೈತ ಸಿದ್ದಪ್ಪ ಆಡೋಳ್ಳಿ (65)ನಾಪತ್ತೆಯಾಗಿದ್ದಾರೆ. ಕೃಷ್ಣಾ ನದಿ ದಂಡೆಯಲ್ಲಿ ರೈತನ ಸೈಕಲ್ ಪತ್ತೆಯಾಗಿದೆ. ರೈತ ಸಿದ್ದಪ್ಪ ಅಡೋಳ್ಳಿ ಕೃಷ್ಣೆಯ ನೀರಲ್ಲಿ ಕೊಚ್ಚಿ ಹೋಗಿರಬಹುದು ಎಂದು ಶಂಕಿಸಲಾಗಿದೆ.
ಘಟನಾ ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು ಹಾಗೂ ಅಗ್ನಿಶಾಮಕ ದಳ ಸಿಬ್ಬಂದಿ ಭೇಟಿ ನೀಡಿ ರೈತನ ಪತ್ತೆಗೆ ಕಾರ್ಯಾಚರಣೆ ನಡೆಸಿದ್ದಾರೆ.