ತೋಟದಲ್ಲಿ ಕೃಷಿಕ ಹೃದಯಾಘಾತದಿಂದ ಸಾವು

New Project (67)
Published on

ಕಡಬ: ತೋಟಕ್ಕೆ ಪೈಪ್ ಅಳವಡಿಸಲು ಹೋದ ವೇಳೆ ಕೃಷಿಕರೊಬ್ಬರು ಹೃದಯಾಘಾತಕ್ಕೆ ಬಲಿಯಾದ ಘಟನೆ ಕಡಬದಲ್ಲಿ ಬುಧವಾರ ನಡೆದಿದೆ. ಕಡಬ ಗ್ರಾಮದ ಅಲಂಗೂರು-ತಿಮರಡ್ಡ ನಿವಾಸಿ ಮೋಹನ್ ರೈ(55) ಹೃದಯಾಘಾತಕ್ಕೆ ಬಲಿಯಾದ ಕೃಷಿಕ. ಮುಂಜಾನೆ ತನ್ನ ಮನೆ ಸಮೀಪದ ಕಾಡುತೋಟ ಎಂಬಲ್ಲಿನ ತನ್ನ ತೋಟಕ್ಕೆ ಪೈಪ್ ಅಳವಡಿಸಲೆಂದು ತೆರಳಿದ್ದರು. ತೋಟಕ್ಕೆ ಹೋದವರು ಬಾರದೆ ಇರುವುದನ್ನು ಗಮನಿಸಿದ ಮನೆಯವರು ಹುಡುಕಾಡುತ್ತಾ ತೋಟಕ್ಕೆ ಹೋಗಿದ್ದರು. ಈ ಸಂದರ್ಭ ಅಸ್ವಸ್ಥಗೊಂಡ ರೀತಿಯಲ್ಲಿ ಪತ್ತೆಯಾಗಿದ್ದು ಕೂಡಲೇ ಸ್ಥಳೀಯರ ನೆರವಿನಲ್ಲಿ ಕಡಬ ಸಮುದಾಯ ಆಸ್ಪತ್ರೆಗೆ ಕೊಂಡೊಯ್ದರೂ ಫಲಕಾರಿಯಾಗಲಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net