aವಿದ್ಯುತ್ ಪ್ರವಹಿಸಿ ರೈತ ಸಾವು

3 mlv 1 __.__._______(49)
Published on

ಮಳವಳ್ಳಿ: ತಾಲೂಕಿನ ಚಿಕ್ಕಮುಲಗೂಡು ಗ್ರಾಮದ ರೈತ ಜಮೀನಿನಲ್ಲಿ ಪಂಪ್‌ಸೆಟ್ ಮೋಟರ್ ಚಾಲನೆ ಮಾಡುವ ವೇಳೆ ವಿದ್ಯುತ್ ಪ್ರವಹಿಸಿ ಸೋಮವಾರ ಮೃತಪಟ್ಟಿದ್ದಾರೆ.

ಗ್ರಾಮದ ತಮ್ಮಯ್ಯಪ್ಪ ಅವರ ಪುತ್ರ ಸಿ.ಎಂ.ಮಲ್ಲೇಶ್(49) ಮೃತ ರೈತ. ಇವರು ತಮ್ಮ ಜಮೀನಿನಲ್ಲಿ ಬೆಳೆಗೆ ನೀರು ಹಾಯಿಸಲೆಂದು ತೆರಳಿದ್ದು, ಬೋರ್‌ವೆಲ್ ಪಂಪ್‌ಸೆಟ್ ಮೋಟರ್ ಚಾಲನೆಗೆ ಅಳವಡಿಸಿದ್ದ ಸ್ಟಾಟರ್ ಸ್ವಿಚ್ ಆನ್ ಮಾಡುವ ಸಂದರ್ಭದಲ್ಲಿ ವಿದ್ಯುತ್ ಪ್ರವಹಿಸಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮಂಡ್ಯ ಜಿಲ್ಲಾಸ್ಪತ್ರೆಯಲ್ಲಿ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿ ಮಂಗಳವಾರ ಕುಟುಂಬಕ್ಕೆ ಶವ ನೀಡಲಾಗಿದೆ. ಕಿರುಗಾವಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net