ಹಾವು ಕಡಿತಕ್ಕೊಳಗಾಗಿ ರೈತ ಸಾವು

snake
Published on

ನರಗುಂದ: ಹೊಲದಲ್ಲಿ ಹಾವು ಕಡಿಕ್ಕೊಳಗಾಗಿ ರೈತ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ತಾಲೂಕಿನ ಬನಹಟ್ಟಿ ಗ್ರಾಮದಲ್ಲಿ ಬುಧವಾರ ಸಂಭವಿಸಿದೆ. ಶಂಕರಗೌಡ ಶಿವಪ್ಪ ಯಂಡಿಗೇರಿ (45) ಮೃತಪಟ್ಟ ರೈತ. ಬನಹಟ್ಟಿ ಗ್ರಾಮದ ಸರಹದ್ದಿನಲ್ಲಿರುವ ತಮ್ಮ ಜಮೀನಿಗೆ ಕಟಾವಿಗೆ ಬಂದಿರುವ ಹೆಸರು ಬೆಳೆ ನೋಡಲು ತೆರಳಿದ್ದ. ಈ ವೇಳೆ ಹೊಲದ ಬದುವಿನಲ್ಲಿ ಕಸ ಕೀಳುತ್ತಿದ್ದಾಗ ಕಾಲಿಗೆ ಹಾವು ಕಚ್ಚಿದ್ದರಿಂದ ಮೃತಪಟ್ಟಿದ್ದಾನೆ. ಈ ಕುರಿತು ಮೃತನ ಪತ್ನಿ ರೇಣುಕಾ ಯಂಡಿಗೇರಿ ನರಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net