

ಚಿಕ್ಕಮಗಳೂರು: ಮನೆಯಲ್ಲಿ ಇಟ್ಟಿದ್ದ ಬಂದೂಕನ್ನು ತೆಗೆಯುವಾಗ ಆಕಸ್ಮಿಕವಾಗಿ ಮಿಸ್ ಫೈರ್ ಆದ ಪರಿಣಾಮ ರೈತನುರ್ವ ಧಾರಣವಾಗಿ ಮೃತಪಟ್ಟಿರುವ ಘಟನೆ ಚಿಕ್ಕಮಗಳೂರು ತಾಲೂಕು ಮಲ್ಲಂದೂರು ಪೊಲೀಸ್ ಠಾಣಾ ವ್ಯಾಪ್ತಿಯ ಕಳವಾಸೆ ಗ್ರಾಮದಲ್ಲಿ ನಡೆದಿದೆ.
ಕಳವಾಸೆ ಗ್ರಾಮದ ರೈತ ಆನಂದ್ ಮಿಸ್ ಫೈರ್ ನಿಂದ ಮೃತಪಟ್ಟ ರೈತ. ಮನೆಯ ಮುಂಭಾಗದ ಕೊಠಡಿಯಲ್ಲಿಟ್ಟಿದ್ದ ಬಂಧೂಕನ್ನು ಮನೆಯ ಒಳಗೆ ಇಡಲು ಬಂದೂಕು ತೆಗೆದುಕೊಳ್ಳಲು ಆನಂದ್ ಹೋಗಿದ್ದಾರೆ. ಈ ವೇಳೆ ಬಂದೂಕು ಮಿಸ್ ಫೈರ್ ಆಗಿದೆ. ಪರಿಣಾಮ ಗುಂಡು ಆನಂದ್ ಕಣ್ಣಿಗೆ ತಗ್ಗುಲಿ ತಲೆಯ ಭಾಗದಿಂದ ಹೊರಬಂದ ಕಾರಣ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಆನಂದ್ ಅವರ ಹೆಂಡತಿ ಮಕ್ಕಳು ಊರಿಗೆ ತೆರಳಿದ್ದು ನಿನ್ನೆ ರಾತ್ರಿ ವಾಪಸ್ ಬರುವವರಿದ್ದರು. ಹೀಗಾಗಿ ಹೆಂಡತಿ ಮಕ್ಕಳನ್ನು ಮನೆಗೆ ಕರೆದುಕೊಂಡು ಬರಲು ಆನಂದ್ ಬಸ್ ನಿಲ್ದಾಣಕ್ಕೆ ಹೋಗಲು ರೆಡಿಯಾಗಿದ್ದರು. ಈ ವೇಳೆ ಬಂದೂಕನ್ನು ಮನೆಯ ಒಳಗೆ ಇಟ್ಟು ತೆರಳಲು ಹೋದಾಗ ದುರ್ಘಟನೆ ಸಂಭವಿಸಿದೆ ಎಂದು ಕುಟುಂಬದವರು ಮಲ್ಲಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಅರಣ್ಯ ಪ್ರದೇಶದಲ್ಲಿ ಒಂಟಿ ಮನೆಯಲ್ಲಿ ಇದ್ದ ಕಾರಣದಿಂದ ಹಾಗೂ ವನ್ಯಜೀವಿಗಳ ಹಾವಳಿ ಹೆಚ್ಚಿದ್ದ ಕಾರಣದಿಂದಾಗಿ ಆನಂದ್ ಅವರು ಪರವಾನಗಿ ಪಡೆದು ಬಂದೂಕನ್ನು ತಮ್ಮ ಮನೆಯಲ್ಲಿ ಇಟ್ಟುಕೊಂಡಿದ್ದರು. ಇದೀಗ ಅದೇ ಬಂದೂಕಿಗೆ ಆನಂದ್ ಬಲಿಯಾಗಿದ್ದಾರೆ.