ತಾವರಗೊಪ್ಪದಲ್ಲಿ ಸಿಡಿಲು ಬಡಿದು ರೈತ ಕಾರ್ವಿುಕ ಸಾವು

SHIVAPPA KOTRANNANAVAR
Published on

ಹಾನಗಲ್ಲ: ಜಮೀನಿನಲ್ಲಿ ಕೆಲಸ ಮಾಡುತ್ತಿದ್ದಾಗ ಸಿಡಿಲು ಬಡಿದು ರೈತ ಕೂಲಿ ಕಾರ್ವಿುಕ ಮೃತಪಟ್ಟ ಘಟನೆ ತಾಲೂಕಿನ ತಾವರಗೊಪ್ಪ ಗ್ರಾಮದಲ್ಲಿ ಭಾನುವಾರ ಸಂಜೆ ಸಂಭವಿಸಿದೆ.

ತಾಲೂಕಿನ ಶಿವಪುರ ಗ್ರಾಮದ ರೈತ ಕೂಲಿ ಕಾರ್ವಿುಕ ಶಿವಪ್ಪ ದೊಡ್ಡಫಕೀರಪ್ಪ ಕೊಟ್ರಣ್ಣನವರ (50) ಮೃತ ದುರ್ದೈವಿ. ಮೂಲತಃ ಬಸಾಪುರ ಗ್ರಾಮದ ಶಿವಪ್ಪ, ಶಿವಪುರ ಗ್ರಾಮದಲ್ಲಿ ವಾಸವಿದ್ದಾರೆ. ಭಾನುವಾರ ಸಂಜೆ ತಾಲೂಕಿನ ಕೆಲವೆಡೆ ಗುಡುಗು ಸಹಿತ ಸುರಿದ ಮಳೆ ಸಂದರ್ಭದಲ್ಲಿ ಈ ದುರ್ಘಟನೆ ನಡೆದಿದೆ. ಸ್ಥಳಕ್ಕೆ ತಹಸೀಲ್ದಾರ್ ರವಿಕುಮಾರ ಕೊರವರ ಭೇಟಿ ನೀಡಿ ಪರಿಶೀಲಿಸಿದರು. ಹಾನಗಲ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net