

ಅಥಣಿ ಗ್ರಾಮೀಣ: ಜಮೀನಿನಲ್ಲಿ ಕೃಷಿ ಪಂಪಸೆಟ್ ಮೋಟಾರ್ ಪ್ರಾರಂಭಿಸಲು ಹೋದ ಅಥಣಿ ತಾಲೂಕಿನ ಅಡಹಳ್ಳಟ್ಟಿ ಗ್ರಾಮದ ರೈತ ಧರಿಯಪ್ಪ ಕೊಂಡಿ (28) ವಿದ್ಯುತ್ ತಗುಲಿ ಮೃತಪಟ್ಟ ಟನೆ ಶನಿವಾರ ನಡೆದಿದೆ. ಧರಿಯಪ್ಪ ಕಬ್ಬಿನ ಬೆಳೆಗೆ ನೀರುಣಿಸಲು ಪಂಪ್ಸೆಟ್ ಪ್ರಾರಂಭಿಸಲು ಸ್ಟಾರ್ಟರ್ ಡಬ್ಬಿ ಓಪನ್ ಮಾಡಿದಾಗ ಈ ದುರ್ಟನೆ ನಡೆದಿದೆ. ನರಳಾಡುತ್ತ ಜಮೀನಿನಲ್ಲಿ ಬಿದ್ದಿದ್ದನ್ನು ಕಂಡ ಕುಟುಂಬಸ್ಥರು ಹಾಗೂ ಸ್ಥಳಿಯರು ಅಥಣಿ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯದಲ್ಲೇ ಮೃತಪಟ್ಟಿದ್ದಾರೆ ಎಂದು ಪ್ರಕರಣ ದಾಖಲಿಸಿಕೊಂಡಿರುವ ಐಗಳಿ ಠಾಣೆ ಪೊಲೀಸರು ತಿಳಿಸಿದ್ದಾರೆ.