ತೆಂಗಿನ ಮರದಿಂದ ಬಿದ್ದು ಕೃಷಿಕ ಸಾವು

Death 5 May 20
Published on

ಉಡುಪಿ: ಹೆಬ್ರಿ ಕುಚ್ಚೂರು ಗ್ರಾಮದ ಹುತ್ರಬೈಲು ಎಂಬಲ್ಲಿ ಕೃಷಿಕರೊಬ್ಬರು 35 ಅಡಿ ಎತ್ತರದ ತೆಂಗಿನ ಮರದಿಂದ ಬಿದ್ದು ಸಾವನ್ನಪ್ಪಿದ್ದಾರೆ. ಕೃಷಿ ಕೆಲಸ ಮಾಡಿಕೊಂಡಿದ್ದ ಕರುಣಾಕರ ನಾಯ್ಕ(35) ಎಂಬುವರು ಮಂಗಳವಾರ ಸಾಯಂಕಾಲಮನೆಯ ಹಿಂದಿರುವ ತೆಂಗಿನ ಮರದಲ್ಲಿ ಕಾಯಿ ತೆಗೆಯಲು ಯಂತ್ರದ ಸಹಾಯದಿಂದ ಮರ ಏರಿದ್ದಾರೆ.

ತೆಂಗಿನ ಕಾಯಿ ತೆಗೆದು ಕೆಳಗೆ ಇಳಿಯುವಾಗ ಕಾಲು ಜಾರಿ 35 ಅಡಿ ಮೇಲಿಂದ ಬಿದ್ದಿದ್ದಾರೆ. ಪರಿಣಾಮ ತಲೆಗೆ ಪೆಟ್ಟಾಗಿ ಕಿವಿಯಲ್ಲಿ ರಕ್ತ ಸೋರಿಕೆಯಾಗಿ ಗಂಭೀರ ಗಾಯಗೊಂಡಿದ್ದರು. ಹೆಬ್ರಿ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು ವೈದ್ಯರು ಪರೀಕ್ಷಿಸಿದ ಸಂದರ್ಭ ಅವರು ಮೃತಪಟ್ಟಿದ್ದರು. ಹೆಬ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net