ಕೃಷಿಕರಿಗಾಗಿ ಇವೆ ಸಹಕಾರ ಬ್ಯಾಂಕ್‌ಗಳು

09 Arakera Photo 02
filter: 0; fileterIntensity: 0.0; filterMask: 0; captureOrientation: 0; algolist: 0; multi-frame: 0; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (-1.0, -1.0);sceneMode: 8;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: weather?null, icon:null, weatherInfo:100;temperature: 48;
Published on



ಅರಕೇರಾ: ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಬಡ ಹಾಗೂ ಮಧ್ಯಮ ವರ್ಗದ ಕೃಷಿಕರಿಗೆ ಆರ್ಥಿಕವಾಗಿ ಶಕ್ತಿ ತುಂಬುವ ಕೆಲಸ ಮಾಡುತ್ತಿವೆ ಎಂದು ಆರ್‌ಕೆಡಿಸಿಸಿ ಬ್ಯಾಂಕ್ ನಿರ್ದೇಶಕ ಎ.ರಾಜಶೇಖರ ನಾಯಕ ಹೇಳಿದರು.

ತಾಲೂಕಿನ ಹೇಮನೂರು ಗ್ರಾಮದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಟ್ಟಡ ಉದ್ಘಾಟಿಸಿ ಶುಕ್ರವಾರ ಮಾತನಾಡಿದರು. ಜಿಲ್ಲೆಯಲ್ಲಿ ಸಹಕಾರ ಸಂಘಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ. ಸಹಕಾರ ಕ್ಷೇತ್ರ ವಾಣಿಜ್ಯ ಬ್ಯಾಂಕ್‌ಗಳಿಗಿಂತ ಭಿನ್ನವಾಗಿ ನಡೆಯುತ್ತಿವೆ. ಕೃಷಿಕರ ಅನುಕೂಲಕ್ಕಾಗಿ ಸ್ಥಾಪಿತವಾದ ಸಹಕಾರ ಸಂಸ್ಥೆಗಳು ಪ್ರಗತಿ ಸಾಧಿಸುತ್ತಿರುವುದಕ್ಕೆ ಸಹಕಾರಿಗಳೆಲ್ಲರೂ ಹೆಮ್ಮೆಪಡಬೇಕಾಗಿದೆ. ಕೃಷಿಕರು ಸಹಕಾರ ಬ್ಯಾಂಕ್‌ಗಳ ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.

ಪ್ರಾಕೃಪಸ ಸಂಘದ ಅಧ್ಯಕ್ಷ ಹಂಪಯ್ಯ ನಾಯಕ ಮಾತನಾಡಿ, ಪ್ರಾಕೃಪಸ ಸಂಘಗಳು ಜನರ ವಿಶ್ವಾಸಾರ್ಹತೆ ಗಳಿಸಿವೆ. ರೈತರಿಗೆ ಕೃಷಿ ಸಲುವಾಗಿ ಶೂನ್ಯ ಬಡ್ಡಿ ದರದಲ್ಲಿ ನೀಡುವ ಸಾಲವನ್ನು ಸಕಾಲದಲ್ಲಿ ಮರುಪಾವತಿ ಮಾಡಬೇಕು. ಇದರಿಂದ ರೈತರಿಗೆ ಬಡ್ಡಿಹೊರೆ ಬೀಳುವುದಿಲ್ಲ ಎಂದರು.

ಪ್ರಮುಖರಾದ ಶಿವರಾಜ ಕ್ಯಾದಿಗ್ಗೇರಾ, ಬಸವರಾಜ ನಾಯಕ ಮಟ್ಲ, ಮಾನಸಯ್ಯ ನಾಯಕ, ಅಮರೇಶ ನಾಯಕ, ಶಿವಕುಮಾರ ನಾಯಕ ಕಾಟಮಳ್ಳಿ, ರಾಮಸ್ವಾಮಿ, ಶಿವಪ್ಪ ನಾಯಕ, ಶಿವರಾಜ ಮಾದೆ, ಲಿಂಗಣ್ಣ ನಾಯಕ ಹವಲ್ದಾರ್, ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಮರಿಲಿಂಗಪ್ಪ ಗೌಡ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net