ರೈತರ ಬದಲಿಗೆ ಕಂಪನಿಗಳ ರಕ್ಷಣೆ

05 Arakera Photo 01
Published on

ಅರಕೇರಾ: ಕೇಂದ್ರ ಸರ್ಕಾರ ರೈತರನ್ನು ಕೃಷಿಯಿಂದ ಒಕ್ಕಲೆಬ್ಬಿಸಿ ಸಂಪೂರ್ಣ ಕಾರ್ಪೋರೇಟ್ ಕಂಪನಿಗಳಿಗೆ ಒಪ್ಪಿಸಲು ತೀರ್ಮಾನಿಸಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ದೇವದುರ್ಗ ತಾಲೂಕು ಅಧ್ಯಕ್ಷ ಹಾಜಿ ಮಸ್ತಾನ್ ಹೇಳಿದರು.

ಬಿ.ಗಣೇಕಲ್, ಗಲಗ, ಗಾಣದಾಳ, ಸೋಮನಮರಡಿ, ಯರಗುಡ್ಡ, ಮುಂಡರಗಿ ಸೇರಿ ವಿವಿಧ ಗ್ರಾಮಗಳಲ್ಲಿ ‘ರೈತರಾದ ನಾವು ಏನು ಮಾಡೋಣ. ವಚನ ಪಾಲನೆ ಮಾಡದೆ ರೈತರಿಗೆ ದ್ರೋಹ ಬಗೆದವರಿಗೆ ಬುದ್ಧಿ ಕಲಿಸೋಣ’ ಘೋಷ ವಾಕ್ಯವಿರುವ ಜಾಗೃತಿ ಕರಪತ್ರಗಳನ್ನು ವಿತರಿಸಿ ಭಾನುವಾರ ಮಾತನಾಡಿದರು.

ಸಹಾಯಧನವನ್ನು ಹಂತ ಹಂತವಾಗಿ ತಗ್ಗಿಸಲಾಗಿದೆ. ಅದಾನಿ, ಅಂಬಾನಿ ಕೃಷಿ ಕ್ಷೇತ್ರದಲ್ಲಿ ದೊಟ್ಟ ಮಟ್ಟದಲ್ಲಿ ಹೂಡಿಕೆ ಮಾಡಿದ್ದು, ಈಗ ಅವರ ಕಣ್ಣು ಕೃಷಿ ಭೂಮಿ ಮತ್ತು ಬೆಳೆಗಳ ಮೇಲೆ ಬಿದ್ದಿದೆ. ಎಪಿಎಂಸಿ, ಭೂ ಹಿಡುವಳಿ ಮತ್ತು ಭೂ ಗುತ್ತಿಗೆ ಕಾಯ್ದೆಗಳಿಗೆ ತಿದ್ದುಪಡಿ ತರಲು ಮುಂದಾಗಿದ್ದಾರೆ. ರೈತರನ್ನು ರಕ್ಷಿಸಬೇಕಾದ ಕೇಂದ್ರ ಸರ್ಕಾರ ಕಂಪನಿಗಳ ರಕ್ಷಣೆಗೆ ನಿಂತಿದೆ ಎಂದು ದೂರಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net