ಸಾಲ ಬಾಧೆಯಿಂದ ಮೂಡುಜೆಡ್ಡು ಮನೆ ನಿವಾಸಿ ರೈತ ಆತ್ಮಹತ್ಯೆ

ssuuuuu
Published on

ಉಡುಪಿ: ಕೃಷಿ ಕಾಯಕಕ್ಕಾಗಿ ಸಾಲ ಮಾಡಿ ತೀರಿಸಲಾಗದೆ ಪೆರ್ಡೂರು, ಮೂಡುಜೆಡ್ಡು ಮನೆ ನಿವಾಸಿ ಗುಂಡು ನಾಯ್ಕ (58) ಎಂಬುವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಫೆ.28ರಂದು ಮನೆಯಲ್ಲಿ ಯಾರೂ ಇಲ್ಲದ ವೇಳೆ ಸಾಲದ ಬಗ್ಗೆ ಚಿಂತೆಯಿಂದ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಗದ್ದೆಗೆ ಹಾಕುವ ಕೀಟನಾಶಕ ಸೇವಿಸಿದ್ದರು.

ಗುಂಡು ನಾಯ್ಕ ಅಸ್ವಸ್ಥರಾಗಿದ್ದನ್ನು ಕಂಡ ಮನೆಯವರು ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗೆ ಕರೆ ತಂದಿದ್ದರು. ಮಾ.1ರಂದು ಮಧ್ಯಾಹ್ನ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ. ತೋಟ ಹಾಗೂ ಕೃಷಿ ಕೆಲಸ ಮಾಡಿಕೊಂಡಿದ್ದು, ಕೃಷಿಗಾಗಿ ಸಾಲ ಮಾಡಿದ್ದರು.

ಸರಿಯಾದ ಆದಾಯ ಬಾರದೇ ಇದ್ದುದರಿಂದ ಸಾಲ ತೀರಿಸಲು ಸಾಧ್ಯವಿಲ್ಲದೆ ತೀವ್ರ ನೊಂದಿದ್ದರು. ‘ನಾನು ಬದುಕುವುದಿಲ್ಲ, ಸಾಯುತ್ತೇನೆ’ ಎಂದು ಆಗಾಗ ಹೇಳುತ್ತಿದ್ದರು ಎಂಬುದಾಗಿ ಕುಟುಂಬದವರು ತಿಳಿಸಿದ್ದಾರೆ. ಹಿರಿಯಡಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net