ಕೃಷಿಗೆಂದು ಬ್ಯಾಂಕ್ ಮತ್ತು ಕೈಸಾಲ: ತೀರಿಸಲಾಗದೇ ಮಂಡ್ಯದಲ್ಲಿ ರೈತ ಆತ್ಮಹತ್ಯೆ

Suicide
Published on

ಮಂಡ್ಯ: ತಾಲೂಕಿನ ತಂಗಳಗೆರೆ ಗ್ರಾಮದಲ್ಲಿ ಸಾಲಬಾಧೆ ತಾಳಲಾರದೇ ವಿಷ ಸೇವನೆ ಮಾಡಿ ಆತ್ಮಹತ್ಯೆಗೆ ಯತ್ನಿಸಿದ್ದ ರೈತ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ.

ಗ್ರಾಮದ ರಾಮೇಗೌಡರ ಎಂಬುವರ ಮಗ ಚಂದ್ರಶೇಖರ್(34) ಮೃತ ದುದೈರ್ವಿ. ಇವರು ಹಲ್ಲೇಗೆರೆ ಗ್ರಾಮದಲ್ಲಿ ಹೋಟೆಲ್ ನಡೆಸುತ್ತಿದ್ದು, ಸರಿಯಾಗಿ ವ್ಯಾಪಾರವಾಗದೇ ನಷ್ಟ ಅನುಭವಿಸಿದ್ದರು. ಅತ್ತ ಕೃಷಿಗೆಂದು ಹಾಗೂ ಬೋರ್‌ವೆಲ್ ಕೊರೆಸಲು ಬ್ಯಾಂಕ್ ಮತ್ತು ಕೈಸಾಲ ಮಾಡಿಕೊಂಡಿದ್ದರು. ಆದರೆ ಬೋರ್‌ವೆಲ್‌ನಲ್ಲಿ ನೀರು ಬಾರದೇ ನಷ್ಟವಾಗಿತ್ತು.

ಸಾಲ ತೀರಿಸಲು ಸಾಧ್ಯವಾಗದೇ ಮನನೊಂದಿದ್ದ ಚಂದ್ರಶೇಖರ್ ಜು.22ರಂದು ಮಧ್ಯಾಹ್ನ 3ಗಂಟೆ ಸುಮಾರಿಗೆ ಮನೆಯಲ್ಲಿಯೇ ವಿಷ ಸೇವನೆ ಮಾಡಿದ್ದರು. ಮನೆಯವರು ಗಮನಿಸಿ ಕೂಡಲೇ ಮಂಡ್ಯದಲ್ಲಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುತ್ತಿದ್ದರು. ಆದರೆ ದುರಾದೃಷ್ಟವಶಾತ್ ಜು.23ರಂದು ರಾತ್ರಿ ಮೃತಪಟ್ಟಿದ್ದಾರೆ. ಈ ಸಂಬಂಧ ಚಂದ್ರಶೇಖರ್ ಪತ್ನಿ ಜಯಶೀಲಾ ಕೆರಗೋಡು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net