ಸಾಲ ಬಾಧೆ ತಾಳದೆ ಹೊಲಬಿಕೊಂಡ ಗ್ರಾಮದ ರೈತ ಆತ್ಮಹತ್ಯೆ

crime-logo
Published on

ಹಿರೇಕೆರೂರ: ಸಾಲದ ಬಾಧೆ ತಾಳಲಾರದೆ ರೈತನೊಬ್ಬ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಹೊಲಬಿಕೊಂಡ ಗ್ರಾಮದಲ್ಲಿ ಗುರುವಾರ ಜರುಗಿದೆ.

ಗ್ರಾಮದ ಪ್ರಶಾಂತ ಮಲ್ಲನಗೌಡ ಪಾಟೀಲ (38) ಆತ್ಮಹತ್ಯೆ ಮಾಡಿಕೊಂಡ ರೈತ. ಈತ ಕೃಷಿ ಚಟುವಟಿಕೆಗಾಗಿ ಕೆವಿಜಿ ಬ್ಯಾಂಕ್​ನಲ್ಲಿ 1 ಲಕ್ಷ ರೂಪಾಯಿ, ಪತ್ನಿ ಹೆಸರಿನಲ್ಲಿ ಗೊಡಚಿಕೊಂಡ ಗ್ರಾಮದಲ್ಲಿರುವ ಜಮೀನಿನ ಮೇಲೆ ಕೆನರಾ ಬ್ಯಾಂಕ್​ನಲ್ಲಿ 35 ಸಾವಿರ ರೂ., ಯೂನಿಯನ್ ಬ್ಯಾಂಕ್​ನಲ್ಲಿ ಬಂಗಾರ ಅಡವಿಟ್ಟು 5 ಲಕ್ಷ ರೂಪಾಯಿ ಹಾಗೂ ರಾಣೆಬೆನ್ನೂರಿನ ಎಲ್​ಐಸಿ ಕಚೇರಿಯಲ್ಲಿ 2 ಎಲ್​ಐಸಿ ಬಾಂಡ್ ಇರಿಸಿ 87 ಸಾವಿರ ರೂಪಾಯಿ ಮತ್ತು ಕೈಗಡ 3 ಲಕ್ಷ ರೂಪಾಯಿ ಸಾಲ ಮಾಡಿಕೊಂಡಿದ್ದರು ಎನ್ನಲಾಗಿದೆ. ಮೆಕ್ಕೆಜೋಳ ಬೆಳೆ ಹಾಳಾಗಿದ್ದರಿಂದ ಮನನೊಂದ ಪ್ರಶಾಂತ ಅ. 3ರಂದು ತನ್ನ ಜಮೀನಿನಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹಿರೇಕೆರೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net