ಸಾಲಬಾಧೆಯಿಂದ ಕಣವಿಸಿದ್ದಗೇರಿ ರೈತ ಆತ್ಮಹತ್ಯೆ

MAHADEVAPPA BALGAVI Death
Published on

ರಟ್ಟಿಹಳ್ಳಿ: ಬೆಳೆ ಹಾನಿ ಮತ್ತು ಸಾಲಬಾಧೆಯಿಂದಾಗಿ ಬೇಸತ್ತು ತಾಲೂಕಿನ ಕಣವಿಸಿದ್ದಗೇರಿ ಗ್ರಾಮದ ರೈತ ಜಮೀನಿನಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಶುಕ್ರವಾರ ಜರುಗಿದೆ.

ಮಹಾದೇವಪ್ಪ ತಂದೆ ಬಸಪ್ಪ ಬಳಗಾವಿ (55) ಆತ್ಮಹತ್ಯೆ ಮಾಡಿಕೊಂಡ ರೈತ. ರೈತ ತನ್ನ 3.5 ಎಕರೆ ಜಮೀನಿನಲ್ಲಿ ಕೃಷಿ ಚಟುವಟಿಕೆಗಾಗಿ ಪಟ್ಟಣದ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ 1 ಲಕ್ಷ ರೂಪಾಯಿ, ಇತರ ಸಹಕಾರಿ ಸಂಘಗಳಲ್ಲಿ 1 ಲಕ್ಷ ರೂಪಾಯಿ ಮತ್ತು ಕೈಗಡವಾಗಿ 4 ಲಕ್ಷ ರೂಪಾಯಿ ಸಾಲ ಮಾಡಿದ್ದರು. ಕಳೆದ 3 ವರ್ಷಗಳಿಂದ ಅತಿವೃಷ್ಟಿ ಮತ್ತು ಅನಾವೃಷ್ಟಿಯಿಂದಾಗಿ ಬೆಳೆಗಳು ಹಾನಿಯಾಗಿದ್ದರಿಂದ ಸಾಲ ಹೇಗೆ ತೀರಿಸಬೇಕೆಂದು ಮನನೊಂದು ತಮ್ಮ ಮಳಗಿ ಗ್ರಾಮದ ಬಳಿ ಇರುವ ಜಮೀನಿನಲ್ಲಿ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೃತ ರೈತನ ಮಗ ಶಿವರಾಜ ಬಳಗಾವಿ ದೂರು ನೀಡಿದ್ದಾರೆ. ರಟ್ಟಿಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net