ಸಾಲಬಾಧೆಗೆ ಹೆದರಿ ರೈತ ಆತ್ಮಹತ್ಯೆ

Crime Logo
Published on

ಬೆಟ್ಟದಪುರ: ಸಮೀಪದ ಹಸುವಿನ ಕಾವಲು ಗ್ರಾಮದಲ್ಲಿ ಸಾಲಬಾಧೆಗೆ ರೈತ ಕ್ರಿಮಿನಾಶಕ ಸೇವಿಸಿ ಮಂಗಳವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.


ಗ್ರಾಮದ ರೈತ ಮಹದೇವ್(58) ಆತ್ಮಹತ್ಯೆ ಮಾಡಿಕೊಂಡ ರೈತ. ಮಹದೇವ್‌ಗೆ 4 ಎಕರೆ ಜಮೀನಿದ್ದು, ಅದರಲ್ಲಿ ಶುಂಠಿ ಹಾಗೂ ತಂಬಾಕು ಬೆಳೆ ಬೆಳೆಯುತ್ತಿದ್ದರು. ಬೆಳೆಗೆ ಇಂಡಿಯನ್ ಓವರ್‌ಸೀಸ್ ಬ್ಯಾಂಕ್‌ನ ಬೈಲಕುಪ್ಪೆ ಶಾಖೆಯಲ್ಲಿ 13 ಲಕ್ಷ ರೂ. ಹಾಗೂ ಪರಿಚಯಿಸ್ಥರಿಂದ 5 ಲಕ್ಷ ರೂ.ಸಾಲ ಪಡೆದಿದ್ದರು. ಎರಡು ವರ್ಷಗಳಿಂದ ಬೆಳೆ ಸರಿಯಾಗಿ ಫಸಲು ನೀಡಿದೆ ಇರುವುದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪತ್ನಿ ನೇತ್ರಾವತಿ ಬೆಟ್ಟದಪುರ ಪೊಲೀಸ್ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ. ಬೆಟ್ಟದಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net