ಸಾಲಬಾಧೆಯಿಂದ ರೈತ ಆತ್ಮಹತ್ಯೆ

5 mlv 1 _______ (36)
ರಾಮಲಿಂಗ
Published on

ಮಳವಳ್ಳಿ: ತಾಲೂಕಿನ ಕಾಳಕೆಂಪನದೊಡ್ಡಿ ಗ್ರಾಮದಲ್ಲಿ ಸಾಲಬಾಧೆಗೆ ಹೆದರಿ ಆತ್ಮಹತ್ಯೆಗೆ ಯತ್ನಿಸಿದ್ದ ರೈತನೊಬ್ಬ ಚಿಕಿತ್ಸೆ ಫಲಿಸದೆ ಬುಧವಾರ ಮಂಡ್ಯ ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಗ್ರಾಮದ ರಾಜಣ್ಣ ಎಂಬುವರ ಪುತ್ರ ರಾಮಲಿಂಗ(36) ಮೃತ ರೈತ. ಬೇಸಾಯ ಮಾಡಲೆಂದು ಸ್ನೇಹಿತರ ಬಳಿ 2 ಲಕ್ಷ ರೂ. ವಿವಿಧ ಖಾಸಗಿ ಫೈನಾನ್ಸ್ ಗಳಿಂದ 3.5 ಲಕ್ಷ ರೂ . ಗಳಿಗೂ ಹೆಚ್ಚು ಸಾಲ ಪಡೆದಿದ್ದರು. ಸರಿಯಾಗಿ ಬೆಳೆ ಬಾರದ ಹಿನ್ನೆಲೆಯಲ್ಲಿ ಸಾಲ ಕೊಟ್ಟವರಿಗೆ ಮರುಪಾವತಿ ಮಾಡುವ ಬಗ್ಗೆ ಚಿಂತಿಸಿ ಮನನೊಂದು ಅ.31 ರಂದು ಮನೆಯಲ್ಲೇ ಕ್ರಿಮಿ ನಾಶಕ ಕುಡಿದಿದ್ದರು. ಕೂಡಲೇ ಕುಟುಂಬದವರು ಸ್ಥಳೀಯ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ, ಜಿಲ್ಲಾಸ್ಪತ್ರೆಗೆ ಕರೆದೊಯ್ದು ದಾಖಲು ಮಾಡಿದ್ದು, ಚಿಕಿತ್ಸೆಗೆ ಸ್ಪಂದಿಸದೆ ಸಾವನ್ನಪ್ಪಿದ್ದಾರೆ ಎಂದು ಮೃತರ ಪತ್ನಿ ಸೌಮ್ಯ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net