ಕೃಷಿ ಹೊಂಡಕ್ಕೆ ಜಿಗಿದು ರೈತ ಆತ್ಮಹತ್ಯೆ

suicide hang
Published on

ನರೇಗಲ್ಲ: ಸಾಲಬಾಧೆಯಿಂದ ನೊಂದಿದ್ದ ರೈತ ಕೃಷಿ ಹೊಂಡಕ್ಕೆ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಸಮೀಪದ ಬೂದಿಹಾಳ ಗ್ರಾಮದಲ್ಲಿ ಗುರುವಾರ ಸಂಭವಿಸಿದೆ. ಶರಣಪ್ಪ ಶಿವಲಿಂಗಪ್ಪ ಮರಲಿಂಗಣ್ಣವರ ಮೃತ ವ್ಯಕ್ತಿ. ಈತ ಜಕ್ಕಲಿ ಗ್ರಾಮದ ಕೆವಿಜಿ ಬ್ಯಾಂಕ್‌ನಲ್ಲಿ 2.5 ಲಕ್ಷ ಸಾಲ ಮಾಡಿದ್ದ. ಮುಂಗಾರು ಸಂಪೂರ್ಣ ಕೈಕೊಟ್ಟ ಪರಿಣಾಮ ಸಾಲದ ಮರುಪಾವತಿ ಹೇಗೆ ಮಾಡಬೇಕೆಂಬ ಚಿಂತೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ನರೇಗಲ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net