ವಿದ್ಯುತ್ ವೈಯರ್ ಹಿಡಿದು ರೈತ ಆತ್ಮಹತ್ಯೆ

FARMER
Published on

ಡಂಬಳ: ಸಾಲಬಾಧೆ ತಾಳದೆ ರೈತನೊಬ್ಬ ವಿದ್ಯುತ್ ವೈಯರ್ ಹಿಡಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಗ್ರಾಮದಲ್ಲಿ ಬುಧವಾರ ನಡೆದಿದೆ. ಮಹ್ಮದ ಅಲಿ ಜಂಧಿಸಾಬ್ ಸರ್ಕವಾಸ (44) ಮೃತಪಟ್ಟ ದುರ್ದೈವಿ.

ಮಹ್ಮದ ಅಲಿ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಐದು ಲಕ್ಷ ರೂ. ಗೃಹಸಾಲ ಪಡೆದಿದ್ದರು. ಆದರೆ, ಬೆಳೆ ಕೈಕೊಟ್ಟಿದ್ದರಿಂದ ಸಾಲ ತೀರಿಸುವುದು ಹೇಗೆ ಎಂಬ ಚಿಂತೆಯಿಂದ ಮನನೊಂದು ಸಾವಿಗೆ ಶರಣಾಗಿದ್ದಾರೆ. ತಹಸೀಲ್ದಾರ್ ಧನಂಜಯ ಮಾಲಗಿತ್ತಿ, ಉಪ ತಹಸೀಲ್ದಾರ್ ಸಿ.ಕೆ. ಬಳೂಟಗಿ, ಕಂದಾಯ ನಿರೀಕ್ಷಕ ಪ್ರಭು ಬಾಗಲಿ, ಗ್ರಾಮ ಲೆಕ್ಕಾಧಿಕಾರಿ ಮಂಜುನಾಥ ಮಂಡಗಾಣಿ, ಡಂಬಳ ಪೊಲೀಸ್ ಠಾಣೆಯ ಎಎಸ್‌ಐ ವೀರಭದ್ರಪ್ಪ ತಂಟ್ರೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಈ ಕುರಿತು ಮುಂಡರಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net