

ಶಿಗ್ಗಾಂವಿ: ಅತಿವೃಷ್ಟಿಯಿಂದಾದ ಬೆಳೆ ಹಾನಿಯಿಂದ ಮನನೊಂದ ರೈತ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಕಡಹಳ್ಳಿ ಗ್ರಾಮದಲ್ಲಿ ಗುರುವಾರ ನಡೆದಿದೆ.
ಯಲ್ಲನಗೌಡ ನಿಂಗನಗೌಡ ಮರೆಪ್ಪನವರ (40) ಆತ್ಮಹತ್ಯೆ ಮಾಡಿಕೊಂಡ ರೈತ.
ಈತ 5 ಎಕರೆ ಜಮೀನು ಹೊಂದಿದ್ದು, ಮನೆ ಕಟ್ಟಲು ಮತ್ತು ಕೃಷಿಗಾಗಿ ಕರ್ನಾಟಕ ಬ್ಯಾಂಕ್, ಸ್ವಸಹಾಯ ಸಂಘ, ೈನಾನ್ಸ್ ಸೇರಿದಂತೆ ಖಾಸಗಿಯಾಗಿ ಸಾಲ ಮಾಡಿದ್ದ. ಬೆಳೆ ಹಾನಿಯಗಿದ್ದರಿಂದ ಸಾಲ ತೀರಿಸುವ ಚಿಂತೆಯಿಂದ ಹೊಲದಲ್ಲಿ ಮರವೊಂದಕ್ಕೆ ನೇಣು ಹಾಕಿಕೊಂಡಿದ್ದಾನೆ. ಯಲ್ಲನಗೌಡ ನೀರಲಗಿ ಎನ್.ಎಂ. ತಡಸ ಗ್ರಾಪಂನಲ್ಲಿ ವಾಟರ್‌ಮನ್ ಕೆಲಸ ಮಾಡುತ್ತಿದ್ದ.
ಈ ಕುರಿತು ಕುರಿತು ತಡಸ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.