

ಸುಬ್ರಹ್ಮಣ್ಯ: ಮಲೆನಾಡು ಜನಹಿತ ರಕ್ಷಣಾ ವೇದಿಕೆ ವತಿಯಿಂದ ರೈತ ಜಾಗತಿ ರ‌್ಯಾಲಿಯ ಪೂರ್ವಭಾವಿ ಸಭೆ ಸುಬ್ರಹ್ಮಣ್ಯಐನೆಕಿದು ಸೊಸೈಟಿ ಸಭಾಂಗಣದಲ್ಲಿ ಶನಿವಾರ ನಡೆಯಿತು.
ಮಲೆನಾಡು ಜನಹಿತ ರಕ್ಷಣಾ ವೇದಿಕೆ ಸಂಚಾಲಕ ಕಿಶೋರ್ ಶಿರಾಡಿ ಅಧ್ಯಕ್ಷತೆ ವಹಿಸಿದ್ದರು.
ನ.4ರಂದು ರೈತ ಜಾಗತಿ ರ‌್ಯಾಲಿ ನಡೆಯಲಿದ್ದು, ಕುಕ್ಕೆ ಸುಬ್ರಹ್ಮಣ್ಯದಲ್ಲಿ ರ‌್ಯಾಲಿಗೆ ಚಾಲನೆ ದೊರೆಯಲಿದೆ. ಬಳಿಕ ಕುಲ್ಕುಂದ, ಕೈಕಂಬ, ಬಿಳಿನೆಲೆ, ನೆಟ್ಟಣ, ಸುಂಕದಕಟ್ಟೆ, ಐತ್ತೂರು, ಮರ್ಧಾಳ, ಕಡಬ, ಹೊಸಮಠ ಮೂಲಕ ಬಲ್ಯಕ್ಕೆ ರ‌್ಯಾಲಿ ಸಾಗಲಿದೆ. ಬೈಕ್, ಇತರ ವಾಹನಗಳ ಮೂಲಕ ರ‌್ಯಾಲಿಯಲ್ಲಿ ಗ್ರಾಮಸ್ಥರು ಭಾಗವಹಿಸಲಿದ್ದಾರೆ. ರ‌್ಯಾಲಿ ಸಾಗುವ ದಾರಿಗಳಲ್ಲಿನ ಪೇಟೆ, ಗ್ರಾಮ ಪಂಚಾಯಿತಿಗಳಿಗೆ ಭೇಟಿ ನೀಡಲಾಗುತ್ತದೆ ಹಾಗೂ ಮುಂದಿನ ಹೋರಾಟಗಳ ಬಗ್ಗೆ ಕರಪತ್ರ ಹಂಚಲಾಗುತ್ತದೆ. ಬಲ್ಯ ಶ್ರೀ ಉಮಾಮಹೇಶ್ವರ ದೇವಸ್ಥಾನದ ಬಳಿ ರ‌್ಯಾಲಿಯ ಸಮಾರೋಪ ಸಮಾರಂಭ ನಡೆಯಲಿದೆ ಎಂದು ಕಿಶೋರ್ ಶಿರಾಡಿ ತಿಳಿಸಿದರು.
ರೈತರು ತಮ್ಮ ಅಹವಾಲುಗಳನ್ನು ಸಲ್ಲಿಸಿದರು. ರ‌್ಯಾಲಿಯ ಉಸ್ತುವಾರಿಗಳಾದ ರಮಾನಂದ ಎಣ್ಣೆಮಜಲು, ಮನೀಷ್ ಪದೇಲಾ, ಅಶೋಕ್ ಕಲ್ಲುಗುಡ್ಡೆ, ಯೊಗೀಶ್ ಬಲ್ಯ, ಪ್ರಮುಖರಾದ ಈಶ್ವರ ಗೌಡ ಅರಂಪಾಡಿ, ದಿಲೀಪ್ ಉಪ್ಪಳಿಕೆ ಮೊದಲಾದವರಿದ್ದರು. ಅಶೋಕ್ ಮೂಲೆಮಜಲು ಸ್ವಾಗತಿಸಿದರು. ರಮಾನಂದ ಎಣ್ಣೆಮಜಲು ನಿರೂಪಿಸಿದರು. ಜಯಪ್ರಕಾಶ್ ಕೂಜುಗೋಡು ವಂದಿಸಿದರು.
ಈಗಾಗಲೇ ಹೋರಾಟದ ಪ್ರಮುಖ ಭಾಗವಾಗಿ ನ.15ರಂದು ಕಡಬದಲ್ಲಿ ಹಕ್ಕೊತ್ತಾಯ ಸಮಾವೇಶ ನಡೆಸಲು ಉದ್ದೇಶಿಸಲಾಗಿದೆ. ರ‌್ಯಾಲಿಯಲ್ಲಿ ಆ ಬಗ್ಗೆ ಪ್ರಚಾರ ಮಾಡಲಾಗ್ತುತದೆ. ನ.30ರಂದು ಸುಬ್ರಹ್ಮಣ್ಯದಲ್ಲಿ ಹಕ್ಕೊತ್ತಾಯ ಸಭೆ ನಡೆಸಲಿದ್ದೇವೆ. ಕಿಶೋರ್ ಶಿರಾಡಿ ಮಲೆನಾಡು ಜನಹಿತ ರಕ್ಷಣಾ ವೇದಿಕೆ ಸಂಚಾಲಕ