ಅಡಕೆ ಸಿಪ್ಪೆಯ ಸಾವಯವ ಗೊಬ್ಬರ ತಯಾರಿಸಿ

web 1
Published on

ಶೃಂಗೇರಿ: ಅಡಕೆ ಸಿಪ್ಪೆ ಕೊಳೆಸಿ ಉತ್ತಮ ಸಾವಯವ ಗೊಬ್ಬರ ಮಾಡಬಹುದು ಎಂದು ಅಡಕೆ ಸಂಶೋಧನಾ ಕೇಂದ್ರದ ಡಾ. ನಿರಂಜನ ಹೇಳಿದರು.

ಧರೆಕೊಪ್ಪ ಗ್ರಾಪಂ ವ್ಯಾಪ್ತಿಯ ಹೊನ್ನವಳ್ಳಿ ಸರ್ಕಾರಿ ಶಾಲೆಯಲ್ಲಿ ಶುಕ್ರವಾರ ಏರ್ಪಡಿಸಿದ್ದ ರೈತ ಮೇಳ ಕಾರ್ಯಕ್ರಮದಲ್ಲಿ ಅಡಕೆ ಸಿಪ್ಪೆಯಿಂದ ಸಾವಯವ ಗೊಬ್ಬರ ತಯಾರಿಕೆಯ ಮಾಹಿತಿ ನೀಡಿದರು.

ಹೈನುಗಾರಿಕೆ ಕಡಿಮೆಯಾಗುತ್ತಿರುವುದರಿಂದ ಸಾವಯವ ಗೊಬ್ಬರ ಉತ್ಪಾದನೆಯೂ ಕುಸಿತವಾಗುತ್ತಿದೆ. ಅಡಕೆ ಸಿಪ್ಪೆ ಅನುಪಯುಕ್ತವಾಗುತ್ತಿದೆ. ಅದರಲ್ಲಿ ಬೆಳೆಗಾರರೇ ಗೊಬ್ಬರ ತಯಾರಿಸಬಹುದು. ಅಂತಹ ಗೊಬ್ಬರ ತೋಟಗಾರಿಕೆ ಬೆಳೆ, ಭತ್ತ, ತರಕಾರಿ ಹಾಗೂ ಹೂವಿನ ಗಿಡಗಳಿಗೆ ಉಪಯೋಗಿಸಬಹುದಾಗಿದೆ. ಸಾವಯವ ಗೊಬ್ಬರ ಮಣ್ಣಿಗೆ ಸೇರಿಸುವುದರಿಂದ ಮಣ್ಣಿನ ಫಲವತ್ತತೆ ಉಳಿದು, ಜೀವಾಣುಗಳು ವೃದ್ಧಿಯಾಗುತ್ತವೆ. ಮಳೆಗಾಲದಲ್ಲಿ ಮಣ್ಣಿನ ಸವಕಳಿ ತಪ್ಪಿಸಬಹುದು ಎಂದು ತಿಳಿಸಿದರು.

ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರವೀಣ್ ಮಾತನಾಡಿ, ರೈತರಿಗೆ ಗೊಬ್ಬರ ತಯಾರಿಕೆಯ ಮಾಹಿತಿ ಅಗತ್ಯವಿದೆ. ಲಘು ಪೋಷಕಾಂಶ ಬಳಕೆ ಮಾಹಿತಿ ಕೊರತೆಯಿಂದ ಉತ್ತಮ ಬೆಳೆ ಪಡೆಯುವಲ್ಲಿ ರೈತರು ವಿಫಲರಾಗುತ್ತಿದ್ದಾರೆ. ತಾಂತ್ರಿಕ ಮಾಹಿತಿಯನ್ನು ವಿಜ್ಞಾನಿಗಳು ನೀಡಬೇಕು ಎಂದರು.

ಪ್ರಗತಿಪರ ರೈತರಾದ ವಿಶ್ವನಾಥ ಹೆಗ್ಡೆ, ರಮೇಶ್, ಆತ್ಮ ಯೋಜನೆ ಅಧ್ಯಕ್ಷ ಕೆ.ಆರ್.ನಾಗೇಂದ್ರ, ಅಡಕೆ ಸಂಶೋಧನಾ ಕೇಂದ್ರದ ನಾರಾಯಣಸ್ವಾಮಿ, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಸಚಿನ್ ಹೆಗಡೆ, ಇಲಾಖೆ ಸಿಬ್ಬಂದಿ ಜಯರಾಜ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net