ನಿರ್ಗಮನ ತಹಸೀಲ್ದಾರ್‌ಗೆ ಬೀಳ್ಕೊಡುಗೆ

sanmana
Published on

ಸುಳ್ಯ: ವರ್ಗಾವಣೆಗೊಂಡ ತಹಸೀಲ್ದಾರ್ ಜಿ.ಮಂಜುನಾಥ್ ಅವರಿಗೆ ಸುಳ್ಯ ಸಂವಿಧಾನಬದ್ದ ಸಮಾನ ಮನಸ್ಕ ಸಂಘಟನೆಯ ವತಿಯಿಂದ ಬೀಳ್ಕೊಡುಗೆ ಕಾರ್ಯಕ್ರಮ ತಾಲೂಕು ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆಯಿತು.

ಸಂಘಟನೆಯ ವತಿಯಿಂದ ತಹಸೀಲ್ದಾರ್ ಅವರನ್ನು ಗೌರವಿಸಲಾಯಿತು. ಸಂಘಟನೆಯ ಸಂಯೋಜಕರಾದ ಭರತ್ ಕುಕ್ಕುಜಡ್ಕ, ಎ.ಕೆ.ಇಬ್ರಾಹಿಂ, ವಸಂತ ಪೆಲ್ತಡ್ಕ, ಗೌರವ ಸದಸ್ಯರಾದ ಮಹಮ್ಮದ್ ಕುಂಞ ಗೂನಡ್ಕ, ಗೀತಾ ಕೋಲ್ಚಾರು, ಉಮ್ಮರ್ ಕೆ.ಎಸ್, ಶರೀಫ್ ಕಂಠಿ, ಮಂಜುನಾಥ್ ಮಡ್ತಿಲ, ಮಹೇಶ್ ಬೆಳ್ಳಾರ್ಕರ್, ಕೇಶವ ಪಾಟಾಳಿ, ಶವಾದ್ ಗೂನಡ್ಕ ಅಬೂಸಾಲಿ, ಕೆ.ಪಿ.ಜಾನಿ ಮೊದಲಾದವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net