ಬಡ್ತಿ ಹೊಂದಿದ ಶಿಕ್ಷಕಿಗೆ ಬೀಳ್ಕೊಡುಗೆ

bilkoduge
Published on

ಕುಂಬಳೆ: ಸೂರಂಬೈಲು ಸರ್ಕಾರಿ ಪ್ರೌಢಶಾಲೆಯಲ್ಲಿ 17 ವರ್ಷಗಳ ಕಾಲ ಶಿಕ್ಷಕಿಯಾಗಿ ಸೇವೆ ಸಲ್ಲಿಸಿ ಈಗ ಮುಖ್ಯಶಿಕ್ಷಕಿಯಾಗಿ ಬಡ್ತಿ ಹೊಂದಿದ ಪ್ರಸನ್ನ ಕುಮಾರಿ ಅವರನ್ನು ಶಾಲಾ ನೌಕರರ ಸಂಘ ವತಿಯಿಂದ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.

1969ರಲ್ಲಿ ಅಡ್ಕಸ್ಥಳದಲ್ಲಿ ಜನಿಸಿ ಅಡ್ಯನಡ್ಕ, ಕಾಟುಕುಕ್ಕೆ ಶಾಲೆಯಲ್ಲಿ ಶಿಕ್ಷಣ ಪೂರೈಸಿ, ಮಾಯಿಪ್ಪಾಡಿಯಲ್ಲಿ ಶಿಕ್ಷಕ ತರಬೇತಿ ಮುಗಿಸಿ ಉಕ್ಕಿನಡ್ಕ ಶಾಲೆಯಲ್ಲಿ ಶಿಕ್ಷಕಿಯಾಗಿ ಸೇವೆಗೆ ಸೇರ್ಪಡೆಯಾದ ಪ್ರಸನ್ನಕುಮಾರಿ ಕುಂಬಳೆ ಹಾಗೂ ಸೂರಂಬೈಲು ಶಾಲೆಯಲ್ಲಿ 30 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ.

ಕಿರಣ್ ಕೆ., ಅಬೂಬಕ್ಕರ್, ಜ್ಯೋತಿ, ಮೋಹನ ನಾರಾಯಣ, ವಿನಯಕುಮಾರಿ, ಸಾವಿತ್ರಿ, ಶಾರದಾ, ಹೇಮಲತಾ, ಲಾರೆಟ್, ಮಂಗಳಗೌರಿ, ಗಾಯತ್ರಿ, ಸೌದತ್ ಕೆಪಿ, ಗೀತ ಕೆ., ರೆಜಿಮೋಳ್ ಮಾನಸ ಮಾತನಾಡಿದರು. ಮುಖ್ಯ ಶಿಕ್ಷಕಿ ಸುನೀತ ಎ. ಸ್ವಾಗತಿಸಿದರು. ರಾಧಾಕೃಷ್ಣ ಬಂಬ್ರಾಣ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net