ಬಿಳಿ ವಸ್ತ್ರ, ಹೂ ಗುಚ್ಚ ಹಿಡಿದು ದಲೈಲಾಮಗೆ ಬೀಳ್ಕೊಡುಗೆ

ಬಿಳಿ ವಸ್ತ್ರ, ಹೂ ಗುಚ್ಚ ಹಿಡಿದು ದಲೈಲಾಮಗೆ ಬೀಳ್ಕೊಡುಗೆ
Published on

ಬೈಲಕುಪ್ಪೆ: ವಿಶ್ರಾಂತಿಗಾಗಿ ಬಂದು ವಾಸ್ತವ್ಯ ಹೂಡಿದ್ದ ಧರ್ಮಗುರು ದಲೈಲಾಮ ಗುರುಪುರಕ್ಕೆ ಕಾರಿನ ಮುಖಾಂತರ ಭಾನುವಾರ ತೆರಳಿದರು.

ಪಿರಿಯಾಪಟ್ಟಣ ತಾಲೂಕಿನ ಬೈಲಕುಪ್ಪೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಲಕ್ಷ್ಮೀಪುರ ತಶಿಲಿಂಪೋ ಮೊನೋಶಿಟ್ರಿ ಆವರಣದ ಪ್ರಾರ್ಥನಾ ಮಂದಿರಕ್ಕೆ ಜ.5ರಂದು ವಿಶ್ರಾಂತಿಗಾಗಿ ಆಗಮಿಸಿ 42ದಿನ ವಾಸ್ತವ್ಯ ಹೂಡಿದ್ದರು. ಈ ಪ್ರಾರ್ಥನಾ ಮಂದಿರದಿಂದ ಕಾರಿನ ಮುಖಾಂತರ ಎರಡನೇ ಕ್ಯಾಂಪಿನ ಮಾರ್ಗ ಹೊರಟು ಒಂದನೇ ಕ್ಯಾಂಪ್ ಮುಖಾಂತರ ಬಿ.ಎಂ.ರಸ್ತೆ ಮಾರ್ಗ ಹುಣಸೂರು ಸಮೀಪ ಟಿಬೆಟಿಯನ್ ಕ್ಯಾಂಪ್ ಗುರುಪುರಕ್ಕೆ ಹೊರಟ ಸುದ್ದಿ ತಿಳಿಯುತ್ತಿದ್ದಂತೆ ಬೈಲಕುಪ್ಪೆ ಸ್ಥಳೀಯ ಟಿಬೆಟಿಯನ್‌ಗಳು ಹಾಗೂ ಬೌದ್ಧ ಬಿಕ್ಕುಗಳು ವೃದ್ಧರು ಮಹಿಳೆಯರು ಶಾಲಾ ಮಕ್ಕಳು ಹೊಸ ಹೊಸ ಬಣ್ಣದ ಉಡುಪುಗಳನ್ನು ತೊಟ್ಟು ರಸ್ತೆ ಉದ್ದಕ್ಕೂ ಬಿಳಿ ವಸ್ತ್ರ ಹಾಗೂ ಹೂಗುಚ್ಛ ಕೈಯಲ್ಲಿ ಹಿಡಿದು ಸ್ವಾಗತ ಕೋರಿ ಮತ್ತೆ ಆರೋಗ್ಯದಿಂದ ಬರುವಂತೆ ಬುದ್ಧನಲ್ಲಿ ಪ್ರಾರ್ಥಿಸಿ ಹಾರೈಸಿದರು.

ಹುಣಸೂರಿನ ಡಿವೈಎಸ್ಪಿ ಗೋಪಾಲಕೃಷ್ಣ, ಬೈಲಕುಪ್ಪೆ ವೃತ್ತ ನಿರೀಕ್ಷಕ ದೀಪಕ್, ಪಿಎಸ್‌ಐ ರವಿ ನೇತೃತ್ವದಲ್ಲಿ ಬಂದೋಬಸ್ತ್ ಒದಗಿಸಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net