

ಬಂಟ್ವಾಳ: ಎರಡೂವರೆ ವರ್ಷ ಬಂಟ್ವಾಳದಲ್ಲಿ ಪ್ರಧಾನ ಸಿವಿಲ್ ನ್ಯಾಯಾಧೀಶರಾಗಿ ಕರ್ತವ್ಯ ನಿರ್ವಹಿಸಿ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿಗೆ ವರ್ಗಾವಣೆಗೊಂಡ ಪ್ರಧಾನ ಸಿವಿಲ್ ನ್ಯಾಯಾಧೀಶ ಚಂದ್ರಶೇಖರ ವೈ.ತಳವಾರ ಅವರನ್ನು ಬಂಟ್ವಾಳ ವಕೀಲರ ಸಂಘದ ವತಿಯಿಂದ ಸನ್ಮಾನಿಸಿ ಬೀಳ್ಕೊಡಲಾಯಿತು.
ಮುಖ್ಯ ಅತಿಥಿಯಾಗಿ ಹಿರಿಯ ಸಿವಿಲ್ ಹಾಗೂ ಜೆಎಂಎಫ್ಸಿ ನ್ಯಾಯಾಧೀಶೆ ಭಾಗ್ಯಮ್ಮ, ಜೆಎಂಎಫ್ಸಿ ನ್ಯಾಯಾಧೀಶ ಕೃಷ್ಣಮೂರ್ತಿ, ವಕೀಲರ ಸಂಘದ ಅಧ್ಯಕ್ಷ ರಿಚರ್ಡ್ ಡಿ ಕೋಸ್ಟ, ಉಪಾಧ್ಯಕ್ಷ ರಾಜೇಶ್ ಬೋಳುಕಲ್ಲು, ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್ ಡಿ., ಜೊತೆ ಕಾರ್ಯದರ್ಶಿ ಸುನಿತಾ, ಖಜಾಂಜಿ ನಿರ್ಮಲ, ಸಂಘದ ಹಿರಿಯ ಸದಸ್ಯ ಅಶ್ವನಿ ಕುಮಾರ್ ರೈ, ರಮೇಶ್ ಉಪಾಧ್ಯಾಯ, ಪುಂಡಿಕಾಯಿ ನಾರಾಯಣ ಭಟ್, ಶ್ರೀಧರ್ ಪೈ, ಚಂದ್ರಶೇಖರ್ ಕೆ.ವಿ., ಕಜೆ ರಾಮಚಂದ್ರ ಭಟ್, ಜಯರಾಮ್ ರೈ, ವೆಂಕಟರಮಣ ಶೆಣೈ ಉಪಸ್ಥಿತರಿದ್ದರು. ವಕೀಲರಾದ ಗಿರೀಶ್ ಮುಳಿಯಾಳ ಸ್ವಾಗತಿಸಿ, ಚಂದ್ರಶೇಖರ್ ಪುಂಚೆಮೆ ವಂದಿಸಿದರು. ಶೈಲಜಾ ಕಾರ್ಯಕ್ರಮ ನಿರೂಪಿಸಿದರು.