ಉನ್ನತ ವಿದ್ಯಾಭ್ಯಾಸಕ್ಕೆ ತೆರಳುತ್ತಿರುವ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ

Farewell to students leaving for higher studies
Published on

ಸುಂಟಿಕೊಪ್ಪ:

ಸುಂಟಿಕೊಪ್ಪದ ಎಸ್‌ಎಂಎಸ್ ಶಿಕ್ಷಣ ಸಂಸ್ಥೆಯಲ್ಲಿ ಶರಫಿ ಪದವಿ ಪಡೆದು ಉನ್ನತ ವಿದ್ಯಾಭ್ಯಾಸಕ್ಕೆ ತೆರಳುತ್ತಿರುವ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭ ಗುರುವಾರ ನಡೆಯಿತು.

ಸಯ್ಯದ್ ಮುಹಮ್ಮದ್ ಅಲಿ ಶಿಹಾಬ್ ತಂಗಳ್ ಶಿಕ್ಷಣ ಸಂಸ್ಥೆಯಲ್ಲಿ 6 ವರ್ಷಗಳ ಕಾಲ ಧಾರ್ಮಿಕ ಹಾಗೂ ಲೌಕಿಕ ಶಿಕ್ಷಣವನ್ನು ಪೂರ್ಣಗೊಳಿಸಿ ಶರಫಿ ಪದವಿಯನ್ನು ಪಡೆದು ಉನ್ನತ ಶಿಕ್ಷಣಕ್ಕಾಗಿ ದಕ್ಷಿಣ ಏಷ್ಯಾದ ಪ್ರಖ್ಯಾತ ಶಿಕ್ಷಣ ಸಂಸ್ಥೆಯಾದ ಜಾಮಿಯಾ ನುರಿಯ ಅರಬಿಕ್ ಕಾಲೇಜ್ ಗೆ ತೆರಳುತ್ತಿರುವ ವಿದ್ಯಾರ್ಥಿಗಳನ್ನು ಎಸ್‌ಎಂಎಸ್ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ಹಾಗೂ ಪೋಷಕರು ಸಂಭ್ರಮದಿAದ ಬೀಳ್ಕೊಟ್ಟರು.

ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಸಂಸ್ಥೆಯ ಕಾರ್ಯದರ್ಶಿ ಸಿ.ಎಂ. ಅಬ್ದುಲ್ ಹಮೀದ್ ಮೌಲವಿ ಕೊಡಗು ಜಿಲ್ಲೆಯ ಮುಸ್ಲಿಂ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ ಮತ್ತು ಸುಧಾರಣೆಯನ್ನು ಗುರಿಯಾಗಿಸಿ 2016ರಲ್ಲಿ ಈ ಶಿಕ್ಷಣ ಸಂಸ್ಥೆಯನ್ನು ಆರಂಭಿಸಲಾಯಿತು. ಆರ್ಥಿಕ ಸಮಸ್ಯೆಯಿಂದ ಶಿಕ್ಷಣದಿಂದ ವಂಚಿತರಾಗುತ್ತಿರುವ ಬಡ ಮಕ್ಕಳಿಗೆ ಉತ್ತಮ ಹಾಗೂ ಉನ್ನತ ಶಿಕ್ಷಣವನ್ನು ಸಂಪೂರ್ಣವಾಗಿ ಉಚಿತವಾಗಿ ನೀಡುವ ಮೂಲಕ ಸಂಸ್ಥೆ ಶ್ರೇಷ್ಠವಾದ ಕೊಡುಗೆಯನ್ನು ನೀಡುತ್ತಿದೆ.

ಮನುಕುಲಕ್ಕೆ ಅನುಗ್ರಹವಾಗುವ ಮತ್ತು ಸಮಾಜಕ್ಕೆ ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕವಾಗಿ ಸೇವೆ ಮಾಡಲು ಶಕ್ತರು ಹಾಗೂ ಸಮರ್ಥರಾದ ಬಹುಭಾಷಾ 14 ಯುವ ಪಂಡಿತರನ್ನು ಸಮರ್ಪಿಸಲು ಸಾಧ್ಯವಾಗಿರುವುದು ನಮ್ಮ ಸಂಸ್ಥೆಯ ದೊಡ್ಡ ಸಾಧನೆ ಎಂದರು. ಇದೇ ಸಂದರ್ಭ ಖುರಾನ್ ಅನ್ನು ಪೂರ್ತಿಯಾಗಿ ಕಂಠಪಾಠ ಮಾಡಿದ ವಿದ್ಯಾರ್ಥಿಗಳನ್ನು ಸಮಾರಂಭದಲ್ಲಿ ಸನ್ಮಾನಿಸಿ ಹಾಫಿಝ್ ಪದವಿಯನ್ನು ನೀಡಲಾಯಿತು. ಮಾಜಿ ಶಾಸಕರು ಹಾಗೂ ಸಂಸ್ಥೆಯ ಮಹಾ ಮುಖ್ಯಸ್ಥರೂ ಆದ ಕೆ.ಎಂ.ಇಬ್ರಾಹಿA ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.

ಜಿಲ್ಲೆಯ ಉಪಕಾಝಿ ಹಾಗೂ ಸಂಸ್ಥೆಯ ಉಪಾಧ್ಯಕ್ಷ ಎಂ.ಎA.ಅಬ್ದುಲ್ಲ ಫೈಝಿ ಸಭೆ ಉದ್ಘಾಟಿಸಿದರು. ಕಾಲೇಜು ಪ್ರಾಂಶುಪಾಲ ಜೈನುದ್ದೀನ್ ಫೈಝಿ ಮುಖ್ಯ ಪ್ರಭಾಷಣ ಮಾಡಿದರು.

ಸಂಸ್ಥೆಯ ಅಧ್ಯಕ್ಷÀ ವೈ.ಎಂ.ಉಮರ್ ಫೈಝಿ, ಕಾಲೇಜು ಮುದರಿಸುಗಳಾದ ಉಸ್ಮಾನ್ ಫೈಝಿ ಅಹಮದ್ ಕಬೀರ್ ಫೈಝಿ ಹಾಗೂ ಉಪನ್ಯಾಸಕÀ ಸುಬ್ರಹ್ಮಣ್ಯ ಆನಂದ ಸಭೆಯನ್ನುದ್ದೇಶಿಸಿ ಮಾತನಾಡಿದರು
ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಹುಸೈನ್ ಕುಶಾಲನಗರ, ಉಪಾಧ್ಯಕ್ಷ ಬಾಪು ಹಾಜಿ, ಕೊಡಗರಹಳ್ಳಿ ಸಿದ್ದೀಕ್ ಹಾಜಿ ಕೊಡ್ಲಿಪೇಟೆ, ನೆಲ್ಯಹುದಿಕೇರಿಯ ಹಸನ್ ಕುಞÂ ಹಾಜಿ, ಮೊಹಮ್ಮದ್ ಎಸ್ ಎಂ ಸುಂಟಿಕೊಪ್ಪ ಅಬ್ಬಾಸ್ ಅಝರಿ ಮುಂತಾದವರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net