

ಬೈಂದೂರು: ಉಪ್ಪುಂದ ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದಲ್ಲಿ ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠಾಧೀಶ ಶ್ರೀ ವಿದ್ಯಾಧೀಶ ಶ್ರೀಪಾದ ವಡೇರ ಸ್ವಾಮೀಜಿ ಉಪಸ್ಥಿತಿಯಲ್ಲಿ ಸೋಮವಾರ ಅರ್ಚಕ ಯು. ಚಂದ್ರಶೇಖರ ಭಟ್ ನೇತೃತ್ವದಲ್ಲಿ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ನಡೆಯಿತು.
ಪೂಜಾ ಕಾರ್ಯದ ನಂತರ ಶ್ರೀಗಳು ಭಕ್ತರಿಗೆ ಫಲಮಂತ್ರಾಕ್ಷತೆ ನೀಡಿದರು.
ಪೇಟೆ ಹತ್ತು ಸಮಸ್ತರು ಗುರುಗಳಿಗೆ ಪಾದಪೂಜೆ ನೆರವೇರಿಸಿದರು. ನಂತರ ಶ್ರೀಗಳನ್ನು ಜಯೋಷದೊಂದಿಗೆ ಮುಂದಿನ ಮೊಕ್ಕಂಗೆ ಬೀಳ್ಕೊಡಲಾಯಿತು. ಯು.ಚಂದ್ರಕಾಂತ ಪ್ರಭು ಕುಟುಂಬಸ್ಥರು, ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ರಾಜೇಶ ಪೈ ಹಾಗೂ ಇತರೆ ಟ್ರಸ್ಟಿಗಳು, ಊರ, ಪರವೂರ ಭಕ್ತರು ಇದ್ದರು.