ಹಿರಿಯ ಉಪನ್ಯಾಸಕ ಡಿ.ಲಕ್ಷ್ಮಣ್‌ಗೆ ಬೀಳ್ಕೊಡುಗೆ

31rajesh6
ಚಾಮರಾಜನಗರ ತಾಲೂಕಿನ ಚಂದಕವಾಡಿ ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಿವೃತ್ತರಾದ ಉಪನ್ಯಾಸಕ ಡಿ.ಲಕ್ಷ್ಮಣ್ ಅವರನ್ನು ಸನ್ಮಾನಿಸಿ ಬೀಳ್ಕೊಡಲಾಯಿತು. ದಡದಹಳ್ಳಿ ರಮೇಶ್, ಬಸವಣ್ಣ, ಸಿದ್ದರಾಜು, ರತ್ನಮ್ಮ ಮತ್ತು ಇತರರು ಹಾಜರಿದ್ದರು.
Published on

ಚಾಮರಾಜನಗರ: ತಾಲೂಕಿನ ಚಂದಕವಾಡಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಇತಿಹಾಸ ವಿಷಯದ ಹಿರಿಯ ಉಪನ್ಯಾಸಕ ಡಿ.ಲಕ್ಷ್ಮಣ್ ವಯೋ ನಿವೃತ್ತಿ ಹೊಂದಿದ ಕಾರಣ ಅವರನ್ನು ಕಾಲೇಜು ವತಿಯಿಂದ ಸನ್ಮಾನಿಸಿ ಬೀಳ್ಕೋಡಲಾಯಿತು.
ಉಪನ್ಯಾಸಕ ಪಿ.ನಟರಾಜ್ ಮಾತನಾಡಿ, ಕಾಲೇಜಿಗೆ ಹಿರಿಯರಾಗಿ ಲಕ್ಷ್ಮಣ್ ನಮಗೆ ಮಾರ್ಗದರ್ಶನ ನೀಡುತ್ತಿದ್ದರು. ವಿದ್ಯಾರ್ಥಿಗಳಿಗೆ ಉತ್ತಮ ಬೋಧನೆ ದೊರೆಯುತ್ತಿತ್ತು, ಕಾಲೇಜಿನಲ್ಲಿ ಎಲ್ಲರೊಡನೆ ಉತ್ತಮ ಬಾಂಧವ್ಯ ಹೊಂದಿದ್ದರು. ಅವರ ನಿವೃತ್ತಿ ಸಹಜವಾಗಿಯೇ ಬೇಸರ ತರಿಸುತ್ತಿದೆ ಎಂದರು.
ನಿವೃತ್ತ ಉಪ ನಿರ್ದೇಶಕ ಡಿ.ಎಸ್.ಕೃಷ್ಣಮೂರ್ತಿ ಮಾತನಾಡಿ, ಸರ್ಕಾರಿ ವೃತ್ತಿಯಲ್ಲಿ ಸೇವಾ ಮನೋಭಾವ ಬೆಳೆಸಿಕೊಳ್ಳಬೇಕು. ಸಂಸ್ಥೆಯ ಅಭಿವೃದ್ಧಿಗೆ ಸದಾ ದುಡಿಯಬೇಕು. ನಾವು ನಶಿಸುತ್ತೇವೆ, ಆದರೆ ನಮ್ಮ ಸೇವೆ ಸ್ಮರಣಿಯವಾಗಿರುತ್ತದೆ ಎಂದರು.
ನಿವೃತ್ತರಾದ ಡಿ.ಲಕ್ಷ್ಮಣ್ ಮಾತನಾಡಿ, ನಾನು ವಯಸ್ಸಿನಲ್ಲಿ ಹಿರಿಯನಾದರೂ ವೃತ್ತಿ ಜೀವನದಲ್ಲಿ ಕಿರಿಯವನಾಗಿ ಕೆಲಸ ಮಾಡಿದ ಸಂತೃಪ್ತಿ ನನಗಿದೆ. ವರ್ಗಾವಣೆಗೆ ಅವಕಾಶವಿತ್ತು. ಇಲ್ಲಿನ ವಾತಾವರಣದಿಂದ ವರ್ಗಾವಣೆಗೆ ಮನಸ್ಸು ಮಾಡದೆ ಚಂದಕವಾಡಿ ಸರ್ಕಾರಿ ಕಾಲೇಜಿನಲ್ಲೇ ನಿವೃತ್ತಿ ಹೊಂದುತ್ತಿದ್ದೇನೆ ಎಂದರು.
ಇದೆ ವೇಳೆ ನಿವೃತ್ತರಾದ ಡಿ.ಲಕ್ಷ್ಮಣ್, ವರ್ಗಾವಣೆಗೊಂಡ ಉಪನ್ಯಾಸಕಿಯರಾದ ಸುಧಾ.ಬಿ.ವಿ. ಮತ್ತು ಶಕುಂತಲಾ ಹೊಸದಾಗಿ ಕರ್ತವ್ಯಕ್ಕೆ ಹಾಜರಾದ ಕೇಶವ್ ಮತ್ತು ಸಾವಿತ್ರಿ ಇವರನ್ನು ಸನ್ಮಾನಿಸಲಾಯಿತು. ಕಾಲೇಜಿನ ಪ್ರಾಂಶುಪಾಲ ಎಚ್.ಎನ್.ಸ್ವಾಮಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಉಪ ಪ್ರಾಂಶುಪಾಲ ಚಂದ್ರಶೇಖರ್, ದಡದಹಳ್ಳಿ ರಮೇಶ್, ಮುನೀರ್, ನಿವೃತ್ತ ಪ್ರಾಂಶುಪಾಲರಾದ ಬಂಗಾರನಾಯಕ, ಡಿ.ಎಸ್.ಲಿಂಗರಾಜು, ಮಂಜುನಾಥ್, ಪ್ರಿಯಶಂಕರ್, ಸತೀಶ್, ಪ್ರಭುಸ್ವಾಮಿ, ಗಾಯತ್ರಿ, ಹೇಮಾ, ಶಿವಸ್ವಾಮಿ, ಅಮಚವಾಡಿ ಮೂರ್ತಿ, ಪಟ್ಟೇಶ್, ಶಾಜಿಯಾ ಹಸನ್, ರತ್ನಮ್ಮ, ಬಸವಣ್ಣ, ಸಿದ್ದರಾಜು ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net