ರೇಷ್ಮೆ ಇಲಾಖೆ ನಿವೃತ್ತ ನೌಕರರಿಗೆ ಬೀಳ್ಕೊಡುಗೆ

Oplus_131072
Oplus_131072
Published on

ಯಳಂದೂರು: ವಯಸ್ಸಿನ ಕಾರಣದಿಂದ ತಮ್ಮ ಚಟುವಟಿಕೆಯಿಂದ ದೂರವಾದರೆ ಆರೋಗ್ಯ ಸಮಸ್ಯೆಯಾಗಬಹುದು, ನಿವೃತ್ತಿ ಬಳಿಕ ವಿವಿಧ ಚಟುವಟಿಕೆ ತಮ್ಮನ್ನು ತೊಡಗಿಸಿಕೊಳ್ಳುವ ಮೂಲಕ ಎಲ್ಲರೊಂದಿಗೆ ಬೆರೆಯಬೇಕೆಂದು ರೇಷ್ಮೆಗೂಡಿನ ಮಾರುಕಟ್ಟೆಯ ರೇಷ್ಮೆ ಸಹಾಯಕ ನಿರ್ದೇಶಕ ಎನ್.ಪುಟ್ಟಮಾದಯ್ಯ ಸಲಹೆ ನೀಡಿದರು.

ಸಮೀಪದ ಸಂತೇಮರಹಳ್ಳಿ ಗ್ರಾಮದ ರೇಷ್ಮೆಗೂಡಿನ ಮಾರುಕಟ್ಟೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಎಸ್.ಶಿವಕುಮಾರ್, ಮಹದೇವಪ್ಪ ಅವರನ್ನು ಇಲಾಖೆ ವತಿಯಿಂದ ಸನ್ಮಾನಿಸಿ ಮಾತನಾಡಿದರು. ರೇಷ್ಮೆ ಇಲಾಖೆಯಲ್ಲಿ ಸುದೀರ್ಘ ವರ್ಷಗಳಿಂದ ಸೇವೆ ಸಲ್ಲಿಸಿ ಮಾರುಕಟ್ಟೆಯನ್ನು ಉತ್ತಮ ನಿರ್ವಹಣೆ ಮಾಡುತ್ತಿದ್ದರು. ನಿಮ್ಮ ನಿವೃತ್ತಿ ಜೀವನವು ಮತ್ತಷ್ಟು ಸುಖಕರವಾಗಿರಲಿ ಎಂದು ಆಶಿಸಿದರು.

ರೇಷ್ಮೆ ನಿರೀಕ್ಷಕ ಮಂಜುನಾಥ್, ಸಿಬ್ಬಂದಿ ಮಹೇಶ್ವರಿ, ಶಿವಸ್ವಾಮಿ, ಮಹದೇವಸ್ವಾಮಿ, ಮಹದೇವಮ್ಮ, ಲಿಂಗರಾಜು, ಬಲರಾಜೇಅರಸು, ಪೃಥ್ವಿರಾಜ್, ದುಗ್ಗಹಟ್ಟಿ ಡಿ.ಪಿ.ಪ್ರಭುಸ್ವಾಮಿ, ಬಿ.ನಾಗರಾಜು, ಚೆನ್ನಬಸಪ್ಪ, ಎನ್.ಮೂರ್ತಿ, ನಾಗೇಶ್, ಶಿವಕುಮಾರ್, ರೀಲರ್‌ಗಳಾದ ಹೊನ್ನೂರು ಎಸ್.ಪಿ.ಸಿದ್ದರಾಜು ಎಚ್.ಸಿ.ಪುಟ್ಟರಾಜು, ದುಂಡಯ್ಯ, ರಾಚಯ್ಯ, ಲಾಟರ್‌ಗಳಾದ ಮಲ್ಲೇಶ್, ಸಿದ್ದಯ್ಯ, ರಾಚಯ್ಯ, ತ್ರಿಪುರಾಂತ ಸೇರಿದಂತೆ ಇತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net