ರವಿಪ್ರಸಾದ್ ಆಲಾಜೆಗೆ ಬೀಳ್ಕೊಡುಗೆ

Kdb_Shavurya-team
Published on

ಕಡಬ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಡಬ ವಲಯದಲ್ಲಿ ಕಳೆದ ಮೂರು ವರ್ಷದಿಂದ ಮೇಲ್ವಿಚಾರಕರಾಗಿ ಕೆಲಸ ನಿರ್ವಹಿಸಿ ಬಿಳಿನೆಲೆ ವಲಯಕ್ಕೆ ವರ್ಗಾವಣೆಗೊಂಡ ರವಿಪ್ರಸಾದ್ ಆಲಾಜೆ ಅವರಿಗೆ ಶ್ರೀ ಧರ್ಮಸ್ಥಳ ಶೌರ್ಯ ವಿಪತ್ತು ನಿರ್ವಹಣಾ ಕಡಬ ಘಟಕದ ವತಿಯಿಂದ ಬೀಳ್ಕೊಡುಗೆ ಕಾರ್ಯಕ್ರಮವು ಕಡಬ ಯೋಜನಾ ಕಚೇರಿ ಸಭಾಂಗಣದಲ್ಲಿ ನಡೆಯಿತು.

ಜನಜಾಗೃತಿ ವೇದಿಕೆಯ ಕಡಬ ವಲಯ ಅಧ್ಯಕ್ಷ ಕರುಣಾಕರ ಗೋಖಟೆ ಮಾತನಾಡಿ, ಪ್ರಾಕೃತಿಕ ವಿಕೋಪ ಹಾಗೂ ಅವಘಡಗಳ ಸಂದರ್ಭ ಅಪಾಯದಲ್ಲಿರುವವರಿಗೆ ಧೈರ್ಯ ತುಂಬುವ ದೃಷ್ಟಿಯಿಂದ ರಚನೆ ಮಾಡಿರುವ ಶೌರ್ಯ ಘಟಕ ವೀರೇಂದ್ರ ಹೆಗ್ಗಡೆಯವರ ದೂರದೃಷ್ಟಿಯ ಸಂಕೇತ ಎಂದರು.

ಕಡಬ ಶೌರ್ಯ ಘಟಕಕ್ಕೆ ಯುವಕರನ್ನು ಸಂಘಟಿಸಿ ರಾಜ್ಯದಲ್ಲಿಯೇ ಮಾದರಿ ಘಟಕವಾಗಿಸಿ ಜಿಲ್ಲಾಮಟ್ಟದಲ್ಲಿ, ತಾಲೂಕು ಮಟ್ಟದಲ್ಲಿ ಗುರುತಿಸಲ್ಪಡುವ ಘಟಕವನ್ನಾಗಿಸಲು ಶ್ರಮಿಸಿದ ಮೇಲ್ವಿಚಾರಕ ರವಿಪ್ರಸಾದ್ ಆಲಾಜೆ ಅವರ ಶ್ರಮ ಶ್ಲಾಘನೀಯ ಎಂದರು.

ಕಡಬ ವಲಯದ ನೂತನ ಮೇಲ್ವಿಚಾರಕ ವಿಜೇಶ್ ಜೈನ್, ಘಟಕ ಪ್ರತಿನಿಧಿ ಹಾಗೂ ತಾಲೂಕು ಶೌರ್ಯ ಘಟಕದ ಮಾಸ್ಟರ್ ಪ್ರಶಾಂತ್ ಎನ್.ಎಸ್., ಕಡಬ ಘಟಕದ ಸಂಯೋಜಕಿ ನಳಿನಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net