ರಾಜು ಯಲ್ಲಪ್ಪ ಭೋವಿಗೆ ಬೀಳ್ಕೊಡುಗೆ

MDK03
Published on

ಮಡಿಕೇರಿ: ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಮಡಿಕೇರಿ ಕಚೇರಿಯಲ್ಲಿ ಪ್ರಥಮ ದರ್ಜೆ ಸಹಾಯಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ರಾಜು ಯಲ್ಲಪ್ಪ ಭೋವಿರವರು ವರ್ಗಾವಣೆಗೊಂಡಿರುವ ಹಿನ್ನೆಲೆ ನಗರದ ವಾರ್ತಾ ಭವನ ಕಚೇರಿಯಲ್ಲಿ ಬೀಳ್ಕೊಡಲಾಯಿತು.


ಕಳೆದ ೬ ವರ್ಷ ೮ ತಿಂಗಳ ಕಾಲ ಕರ್ತವ್ಯ ನಿರ್ವಹಿಸುತ್ತಿದ್ದ ರಾಜು ಯಲ್ಲಪ್ಪ ಭೋವಿರವರು ಉತ್ತರ ಕನ್ನಡ ಜಿಲ್ಲೆಯ ಕಾರವಾರಕ್ಕೆ ವರ್ಗಾವಣೆಗೊಂಡಿದ್ದಾರೆ. ಈ ಹಿನ್ನೆಲೆ ಇಲಾಖೆ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.


ಈ ಸಂದರ್ಭ ವಾರ್ತಾಧಿಕಾರಿ ಚಿನ್ನಸ್ವಾಮಿ ಮಾತನಾಡಿ, ರಾಜು ಯಲ್ಲಪ್ಪ ಭೋವಿರವರು ಪ್ರಥಮ ದರ್ಜೆ ಸಹಾಯಕರಾಗಿ ಕಚೇರಿ ಕೆಲಸ ನಿರ್ವಹಣೆ, ಸಭೆ-ಸಮಾರಂಭ ಹಾಗೂ ಚುನಾವಣಾ ಸಂದರ್ಭದಲ್ಲಿ ಉತ್ತಮವಾಗಿ ಕೆಲಸ ನಿರ್ವಹಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.


ಸನ್ಮಾನ ಸ್ವೀಕರಿಸಿ ಮಾತನಾಡಿದ ರಾಜು ಯಲ್ಲಪ್ಪ ಭೋವಿರವರು, ಕಳೆದ ೬ ವರ್ಷ ೮ ತಿಂಗಳಿಂದ ಮಡಿಕೇರಿ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸಿ ವರ್ಗಾವಣೆ ಹೊಂದಿದ್ದು, ಇಂದು ಬಿಡುಗಡೆ ಹೊಂದಿ ಹೋಗುತ್ತಿದ್ದೇನೆ. ನಾನು ಮೊದಲು ಇಲ್ಲಿ ಬಂದಾಗ ಇಲ್ಲಿಯ ವಾತಾವರಣ ಹಾಗೂ ಅಧಿಕಾರಿ ಸಿಬ್ಬಂದಿಗಳ ಸಹಕಾರದಿಂದ ಕೆಲಸಗಳನ್ನು ಕಲಿತುಕೊಳ್ಳಲು ತುಂಬಾ ಸಹಾಯವಾಯಿತು ಎಂದರು.


ಈ ಸಂದರ್ಭದಲ್ಲಿ ವಾರ್ತಾ ಇಲಾಖೆಯ ನಿವೃತ್ತ ವಾಹನ ಚಾಲಕರಾದ ಪಿ.ಎಸ್.ಗಣೇಶ್, ಎಂ.ಎನ್.ಗಣೇಶ್, ಕಲಾವಿದ ಈ.ರಾಜು, ಸಿಬ್ಬಂದಿಗಳಾದ ಎಂ.ಡಿ.ಪ್ರತಾಪ್, ಎಂ.ದೇವಕಿ, ಅಪ್ರೆಂಟಿಸ್ ಕುಸುಮ, ಪ್ರಮೋದ್, ಪ್ರತಾಪ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net