ಎಸ್‌ಡಿಎಂ ಕಾಲೇಜಿನ ಪ್ರೊ. ವಾಸುದೇವಗೆ ಬೀಳ್ಕೊಡುಗೆ

4 Dwd 1
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ನಗರದ ಎಸ್‌ಡಿಎಂ ಇಂಜಿನಿಯರಿ0ಗ್ ಕಾಲೇಜಿನ ವಿದ್ಯಾರ್ಥಿ ಕಲ್ಯಾಣ ಡೀನ್, ಸಾರ್ವಜನಿಕ ಸಂಪರ್ಕಾಧಿಕಾರಿ ಮತ್ತು ಮಾಹಿತಿ ವಿಜ್ಞಾನ ಸಹಾಯಕ ಪ್ರಾಧ್ಯಾಪಕ ಪ್ರೊ. ವಾಸುದೇವ ಕೆ. ಪಾರ್ವತಿ ಸೇವಾನಿವೃತ್ತಿಯಾದ ಹಿನ್ನೆಲೆಯಲ್ಲಿ ಇತ್ತೀಚೆಗೆ ಬೀಳ್ಕೊಡುಗೆ ಸಮಾರಂಭ ಏರ್ಪಡಿಸಲಾಗಿತ್ತು.

ಪ್ರಾಚಾರ್ಯ ಡಾ. ರಮೇಶ ಚಕ್ರಸಾಲಿ ಮಾತನಾಡಿ, ಡಾ. ವಾಸುದೇವ ಅವರ ಸುದೀರ್ಘ 34 ವರ್ಷಗಳ ಸೇವೆಯನ್ನು ಸಂಸ್ಥೆ ಗೌರವಿಸುತ್ತದೆ ಎಂದರು.

ಮಾಹಿತಿ ವಿಜ್ಞಾನ ಮತ್ತು ಇಂಜಿನಿಯರಿ0ಗ್ ವಿಭಾಗದ ಮುಖ್ಯಸ್ಥ ಡಾ. ಜಗದೀಶ ಪೂಜಾರಿ, ಅಕ್ಯಾಡೆಮಿಕ್ಸ್ ಡೀನ್ ಡಾ. ವಿಜಯಾ ಸಿ., ಕೇಶವ ಜೋಶಿ, ಡಾ. ಕುಮಾರ ಮದ್ದಾನಿ, ಇತರರು ಮಾತನಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net