ಮೀನಾಗೆ ಬೀಳ್ಕೊಡುಗೆ

bilkoduge
Published on

ಕುಶಾಲನಗರ: ರಾಮೇಶ್ವರ ಕೂಡುಮಂಗಳೂರು ಕೃಷಿ ಪತ್ತಿನ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಯಾಗಿ ಸೇವೆ ನಿರ್ವಹಿಸುತ್ತಿದ್ದ ಎಂ.ಪಿ.ಮೀನಾನವರು ವಯೋಮಿತಿಯ ನಿವೃತ್ತಿ ಹೊಂದಿದ ಹಿನ್ನೆಲೆಯಲ್ಲಿ ಸಂಘದ ವತಿಯಿಂದ ಬೀಳ್ಕೊಡುಗೆಯ ಮೂಲಕ ಗೌರವಿಸಿ ನೆನಪಿನ ಕಾಣಿಕೆ ನೀಡಿ ಸಂಘದ ಆಡಳಿತ ಮಂಡಳಿಯ ಅಧ್ಯಕ್ಷ ಕೆ.ಕೆ.ಹೇಮಂತ್ ಕುಮಾರ್ ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಉಪಾಧ್ಯಕ್ಷ ವಿ.ಬಸಪ್ಪ, ಸಂಘದ ನಿರ್ದೇಶಕರಾದ ಕೃಷ್ಣಗೌಡ, ಕೆ.ಟಿ.ಅರುಣ್ ಕುಮಾರ್, ಕೆ.ಪಿ.ರಾಜು, ಅರುಣ್ ರಾವ್, ನಾಗರಾಜು, ಎಸ್.ಎಸ್.ಕೃಷ್ಣ, ರಾಮಚಂದ್ರ, ಕುಮಾರ್, ಜಯಶ್ರೀ, ರಮೇಶ್, ಕೆ.ಕೆ.ಪ್ರವಿತ್ರ, ವೃತ್ತಿ ಪರ ನಿರ್ದೇಶಕರಾದ ಆರ್.ಕೆ.ನಾಗೇಂದ್ರ ಬಾಬು, ಡಿ.ಎನ್.ಚಂದ್ರಶೇಖರ್, ಲೆಕ್ಕಿಗ ಕೆ.ಎಂ.ನಾಗರಾಜು, ಸೇರಿದಂತೆ ಸಿಬ್ಬಂದಿ ವರ್ಗದವರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net