

ಗೊಳಸಂಗಿ: ಹಿಂದು&ಮುಸ್ಲಿಮರ ಭಾವೈಕ್ಯದ ಹಬ್ಬವೆಂದೇ ಕರೆಯಲಾಗುವ ಮೊಹರಂ ಹಬ್ಬಕ್ಕೆ ಗ್ರಾಮದಲ್ಲಿ ಬುಧವಾರ ಭಕ್ತಿ&ಭಾವದಿಂದ ವಿದಾಯ ಹೇಳಲಾಯಿತು.
ವಾರದ ಹಿಂದೆ ಗ್ರಾಮದ ಬಹಾರಪೇಟೆಯ ಮತ್ತು ಬಂಗಲೆ ಓಣಿಯಲ್ಲಿ ತಲಾ ಎರಡು ಸೇರಿ ಒಟ್ಟು ಆರು ಅಲಾಯಿ ದೇವರು ಪ್ರತಿಷ್ಠಾಪಿಸಲಾಗಿತ್ತು. ವಿವಿಧ ಬೀದಿಗಳಲ್ಲಿ ವಾರಪೂರ್ತಿ ಬಾಜಾ ಭಜಂತ್ರಿಯವರ ಸ್ವರದ ನಾದ, ಹಲಗೆ ಮೇಳದ ತಾಳಕ್ಕೆ ತಕ್ಕಂತೆ ಹೆಜ್ಜೆ ಕುಣಿತ, ಅಸಂಖ್ಯಾತ ಭಕ್ತರ ಬಗೆಬಗೆಯ ಸೇವೆಯಿಂದ ಮೊಹರಂ ಸಡಗರ ಎಲ್ಲೆಲ್ಲೂ ಮನೆ ಮಾಡಿತ್ತು.
ಬುಧವಾರ ಬೆಳಗ್ಗೆ ನೆರೆಯ ಬುದ್ನಿ ಗ್ರಾಮದ ಅಲಾಯಿ ದೇವರುಗಳು ವಾಡಿಕೆಯಂತೆ ಗೊಳಸಂಗಿ ಗ್ರಾಮ ಪ್ರವೇಶ ಮಾಡಿ ಅಲ್ಲಲ್ಲಿ ಪ್ರತಿಷ್ಠಾಪನೆಗೊಂಡ ಅಲಾಯಿ ದೇವರುಗಳ ಸನ್ನಿಧಿಗೆ ಭೇಟಿ ನೀಡಿ ಭಕ್ತರ ಸೇವೆಯನ್ನು ಸ್ವೀಕರಿಸಿ ಪುನ@ ಬುದ್ನಿ ಗ್ರಾಮಕ್ಕೆ ತೆರಳಿದವು. ಸಂಜೆಯಾಗುತ್ತಿದ್ದಂತೆಯೇ ಸಹಸ್ರಾರು ಸಂಖ್ಯೆಯಲ್ಲಿ ಬಂಗಲೆ ಓಣಿಯಲ್ಲಿ ಜಮಾಯಿಸಿದ ಹಿಂದು&ಮುಸ್ಲಿಂ ಭಕ್ತರು ಭಕ್ತಿಭಾವದಿಂದ ಅಲಾಯಿ ದೇವರುಗಳಿಗೆ ಬಾಳೆಹಣ್ಣು, ಉತ್ತತ್ತಿ ಅರ್ಪಿಸಿ ಬೀಳ್ಕೊಟ್ಟರು.
ಈರಪ್ಪ ಪರಮಗೊಂಡ, ಮಕ್ತುಮಸಾಬ ಖುರೇಷಿ, ಬಾಬು ಪವಾರ, ಬಂದೇನವಾಜ ಉಕ್ಕಲಿ, ಸುನಿಲ ಚವ್ಹಾಣ, ರಾಜು ಮಂಟೂರ ಅಲಾಯಿ ದೇವರುಗಳ ಪಂಜಾ ಹೊತ್ತಿದ್ದರು.
ವಿಸರ್ಜನೆ ವೇಳೆ ಅಂಜುಮನ್ ಇಸ್ಲಾಂ ಕಮಿಟಿ ಅಧ್ಯ ತಜಮುಲಖಾದ್ರಿಸಾಹೇಬ ಜಾಗೀರದಾರ, ಗ್ರಾಪಂ ಅಧ್ಯ ಕೇಶವ ಪವಾರ, ಗಂಗಾರಾಮ ಪವಾರ, ಹುಚ್ಚಪ್ಪ ಕಮತಗಿ, ಹಜರೇಸಾಬ ನಾಗರಾಳ, ಶಂಕರಗೌಡ ಪಾಟೀಲ, ಬಂದೇನವಾಜ ಡೋಲಚಿ, ಸಹದೇವ ಪವಾರ, ಸಂಗಮೇಶ ಮಲಘಾಣ, ಶಿವಾನಂದ ಗೋಣಿ, ಇಬ್ರಾಹಿಂಸಾಬ ಕಮತಗಿ, ಅಶೋಕ ಗುಡದಿನ್ನಿ ಭಾಗವಹಿಸಿದ್ದರು.