

ಬಸವಕಲ್ಯಾಣ: ವಿದ್ಯಾರ್ಥಿಗಳು ಸಮಯ ಮತ್ತು ಸೌಲಭ್ಯಗಳನ್ನು ಸಮರ್ಪಕವಾಗಿ ಬಳಸಿಕೊಂಡು ಶ್ರಮ ವಹಿಸಿ ಅಭ್ಯಾಸ ಮಾಡಿ ಗುರಿ ಸಾಧಿಸಬೇಕು. ತಮ್ಮ ಭವಿಷ್ಯ ರೂಪಿಸಿಕೊಳ್ಳುವ ಜತೆಗೆ ತಂದೆ-ತಾಯಿ ಕನಸುಗಳನ್ನು ಸಾಕಾರಗೊಳಿಸಬೇಕು ಎಂದು ಆರ್‌ಎಫ್‌ಒ ಐಶ್ವರ್ಯ ಗಬ್ಬೂರ ಹೇಳಿದರು.
ನಗರದ ಎಸ್‌ಎಸ್‌ಕೆ ಬಸವೇಶ್ವರ ಪದವಿ ಮಹಾವಿದ್ಯಾಲಯದಲ್ಲಿ ಶುಕ್ರವಾರ ಆಯೋಜಿಸಿದ್ದ ಬಿಎಸ್ಸಿ ೬ನೇ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದ ಅವರು, ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದ್ದು, ಒಂದೊಂದು ಗಿಡ ನೆಡುವ ಜತೆಗೆ ಕಾಳಜಿಯಿಂದ ಬೆಳೆಸಬೇಕು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಬಸವರಾಜ ಎವಲೆ ಮಾತನಾಡಿ, ಜ್ಞಾನ ಅವಶ್ಯಕವಾಗಿದ್ದು, ನೀವು ಕೇವಲ ಪದವಿಯನ್ನು ಪಡೆದರೆ ಸಾಲದು, ಅದರ ಜತೆಯಲ್ಲಿ ಜ್ಞಾನವನ್ನು ಬೆಳೆಸಿಕೊಳ್ಳಬೇಕು. ಜೀವನದಲ್ಲಿ ಯಾವುದೇ ಕ್ಷೇತ್ರ ಆಯ್ಕೆ ಮಾಡಿಕೊಂಡರೂ ಸಹ ಯಶಸ್ವಿಯಾಗಲು ಕಠಿಣ ಪರಿಶ್ರಮದ ಅವಶ್ಯಕತೆ ಇದೆ. ಶಿಸ್ತು, ಸಮಯ ಪಾಲನೆ, ಮಾನಸಿಕ ಹಾಗೂ ಭೌತಿಕ ಸದೃಢತೆ ಹೊಂದಿದಾಗ ಇದ್ದಾಗ ಮಾತ್ರ ಗುರಿ ಮುಟ್ಟಲು ಸಾಧ್ಯ ಎಂದು ಹೇಳಿದರು.
ಪ್ರೊ.ಆರ್.ಡಿ.ಬಾಲಿಕಿಲೆ ಮಾತನಾಡಿದರು. ಐಕ್ಯೂಎಸಿ ಸಂಯೋಜಕ ಡಾ. ಶಿವಕುಮಾರ ಪಾಟೀಲ್ ಪ್ರಾಸ್ತಾವಿಕ ಮಾತನಾಡಿದರು. ಹಿರಿಯ ಪ್ರಾಧ್ಯಾಪಕರಾದ ಡಾ.ಎಂ.ಜಿ.ಪಾಟೀಲ್, ಶಾಂತಕುಮಾರ ಬಾಬನಗೋಳ, ವಿಠೋಬಾ ದೊಣ್ಣೇಗೌಡರ, ಡಾ.ಸುರೇಶ್ ಎಚ್.ಆರ್., ಗ್ರಂಥಪಾಲಕ ಸೂರ್ಯಕಾಂತ ನಾಸೆ. ಇಂದ್ರಜಿತ್‌ರಡ್ಡಿ, ದೀಪಕ ಕಾಡಾದೆ, ಶಿವಕುಮಾರ ಕೊಲ್ಲೆ, ಶಿವಾನಂದ ಬಿರಾದಾರ. ಕುಮಾರಿ ರಂಜಿತಾ, ವೈಶಾಲಿ ಹಾವಶೆಟ್ಟಿ, ಜ್ಯೋತಿ ಪಾಟೀಲ್ ಇತರರಿದ್ದರು. ವಿದ್ಯಾರ್ಥಿ ನೇತ್ರ ಕಳಮಾಸೆ ನಿರೂಪಣೆ ಮಾಡಿದರು.