ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಆಗಿ ಪದೋನ್ನತಿ: ನಗರದಲ್ಲಿ ಶ್ರೀನಿವಾಸ್‌ಗೆ ಬೀಳ್ಕೊಡುಗೆ ಸಮಾರಂಭ

Farewell to Assistant Executive Engineer Mandya
Published on

ಮಂಡ್ಯ: ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಆಗಿ ಪದೋನ್ನತಿ ಪಡೆದ ಜಿಲ್ಲಾ ಪಂಚಾಯಿತಿ ಸಹಾಯಕ ಇಂಜಿನಿಯರ್ ಟಿ.ಶ್ರೀನಿವಾಸ್ ಅವರಿಗೆ ಜಿಲ್ಲಾ ಗುತ್ತಿಗೆದಾರರ ಸಂಘದ ವತಿಯಿಂದ ನಗರದ ಕಲ್ಲಹಳ್ಳಿ ಪಂಕ್ಷನ್ ಹಾಲ್ನಲ್ಲಿ ಶನಿವಾರ ಆಯೋಜಿಸಿದ್ದ ಸಮಾರಂಭದಲ್ಲಿ ಬೀಳ್ಕೊಡುಗೆ ನೀಡಲಾಯಿತು.

ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷರೂ ಆದ ಪ್ರಥಮ ದರ್ಜೆ ಗುತ್ತಿಗೆದಾರ ಸಿ.ತ್ಯಾಗರಾಜು ಮಾತನಾಡಿ, ಶ್ರೀನಿವಾಸ್ ಅವರು ಇಂಜಿನಿಯರ್ ಆಗುವ ಮೊದಲು ಪುರಸಭೆ ಸದಸ್ಯರಾಗಿ ಕೆಲಸ ಮಾಡಿದ್ದರು. ಸರ್ಕಾರಿ ಉದ್ಯೋಗದಲ್ಲಿಯೂ ಉತ್ತಮವಾಗಿ ಸ್ಪಂದಿಸುವ ಮೂಲಕ ಜನಾನುರಾಗಿಯಾಗಿ ಕೆಲಸ ಮಾಡುತ್ತಿದ್ದರು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಅಭಿನಂದನೆ ಸ್ವೀಕರಿಸಿ ಮಾತನಾಡಿದ ಟಿ.ಶ್ರೀನಿವಾಸ್, ಮಂಡ್ಯ ಇಂಜಿನಿಯರಿಂಗ್ ವಿಭಾಗದಲ್ಲಿ 12 ವರ್ಷ ಕೆಲಸ ಮಾಡಿದ್ದೇನೆ. ಈ ಅವಧಿಯಲ್ಲಿ ಗುತ್ತಿಗೆದಾರರು ಸಹಕರಿಸಿದ್ದೀರಿ ಎಂದರು.

ಜಿಲ್ಲಾ ಗುತ್ತಿಗೆದಾರರ ಸಂಘದ ಅಧ್ಯಕ್ಷ ಯತಿರಾಜು, ಪ್ರಧಾನ ಕಾರ್ಯದರ್ಶಿ ಕೆ.ರವೀಂದ್ರ, ಜಿ.ಬಿ.ಭೈರವ, ಉದ್ಯಮಿ ಸಿ.ಕೆ.ದೇವರಾಜು, ಮನ್‌ಮುಲ್ ನಿರ್ದೇಶಕ ಶಿವಪ್ಪ, ಆರ್‌ಎಪಿಸಿಎಂಎಸ್ ಅಧ್ಯಕ್ಷ ಯು.ಸಿ.ಶೇಖರ್, ದೇವರಾಜು, ಕೆ.ಸಿ.ಪ್ರಶಾಂತಬಾಬು, ನವೀನ್‌ಕುಮಾರ್, ಎಇಇ ಗಣೇಶ ಹೆಗ್ಡೆ, ಸಹಾಯಕ ಇಂಜಿನಿಯರ್ ನಾಗರಾಜು, ಶ್ರೀಧರ್, ಮಂಜುನಾಥ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net