

ಮಡಿಕೇರಿ:
ಅ. 30ರಂದು ನಿವೃತ್ತಿ ಹೊಂದಲಿರುವ ಬೋಯಿಕೇರಿ ಅಂಗನವಾಡಿ ಕಾರ್ಯಕರ್ತೆ ಯು.ಇ. ಲೀಲಾವತಿ ಅವರಿಗೆ ಶನಿವಾರ ಸನ್ಮಾನ ಮತ್ತು ಬಿಳ್ಕೊಡುಗೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಕಾರ್ಯಕ್ರಮದಲ್ಲಿ ಪ್ರಭಾರ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮೇಪಾಡಂಡ ಸವಿತಾ ಕೀರ್ತನ್, ಪಂಚಾಯಿತಿ ಸದಸ್ಯೆ ನಿರ್ಮಲಾ, ಆಶಾ ಕಾರ್ಯಕರ್ತೆ ಶಾಂತಿ, ಪಿಎಚ್‌ಸಿಓ ಜಯಂತಿ, ಸಿಎಚ್‌ಓ ಕಾರ್ತಿಕ್, ಸಹಾಯಕಿ ಸಫಿಯಾ, ಅಂಚೆ ಇಲಾಖೆಯ ರೇವತಿ ಇದ್ದರು.