

ಧಾರವಾಡ: ಸರ್ಕಾರಿ ಸೇವೆಯಲ್ಲಿ ವರ್ಗಾವಣೆ ಸಾಮಾನ್ಯ. ಆದರೆ, ವೃತ್ತಿ ಮಾಡಿದ ಸ್ಥಳದಲ್ಲಿ ಜನ ಸಂತೃಪ್ತರಾಗಿದ್ದರೆ ಅದು ನಮಗೆ ಸಿಗುವ ದೊಡ್ಡ ಸನ್ಮಾನ ಎಂದು ನಿರ್ಗಮಿತ ಅಪರ ಜಿಲ್ಲಾಕಾರಿ ಶಿವಾನಂದ ಭಜಂತ್ರಿ ಅವರು ಹೇಳಿದರು.
ಜಿಲ್ಲಾಽಕಾರಿ ಕಚೇರಿಯದಲ್ಲಿ ಜಿಲ್ಲಾಡಳಿತದಿಂದ ಗುರುವಾರ ಆಯೋಜಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಸರ್ಕಾರಿ ಸೇವೆಗೆ ನೇಮಕವಾಗುವ ಅಽಕಾರಿ, ಸಿಬ್ಬಂದಿ ಕ್ಷೇತ್ರ ಮಟ್ಟದಲ್ಲಿ ಸಿಗುವ ಅನುಭವದ ಪಾಠಗಳನ್ನು ಮನನ ಮಾಡಿಕೊಳ್ಳಬೇಕು. ಧಾರವಾಡ ಜಿಲ್ಲೆಯ ಜನರು ಸಹೃದಯರು, ಅಭಿವೃದ್ಧಿ ಪ್ರಿಯರು ಮತ್ತು ಜನರಿಗಾಗಿ ದುಡಿಯುವ ಅಽಕಾರಿಗಳ ಅಭಿಮಾನಿಗಳು. ಇಲ್ಲಿನ ಸೇವೆ ನನಗೆ ತೃಪ್ತಿ ತಂದಿದೆ ಎಂದರು.
ಜಿಲ್ಲಾಽಕಾರಿ ಗುರುದತ್ತ ಹೆಗಡೆ ಅಧ್ಯಕ್ಷತೆ ವಹಿಸಿದ್ದರು. ನೂತನ ಅಪರ ಜಿಲ್ಲಾಽಕಾರಿ ಗೀತಾ ಸಿ.ಡಿ., ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಶ್ರವಣಕುಮಾರ ನಾಯಕ, ಭೂದಾಖಲೆಗಳ ಇಲಾಖೆ ಉಪ ನಿರ್ದೇಶಕ ಮೋಹನ ಶಿವಣ್ಣನವರ, ತಹಸೀಲ್ದಾರ್ ಡಾ. ಮೋಹನ ಭಸ್ಮೆ, ರಾಜ್ಯ ಸರಕಾರಿ ನೌಕರ ಸಂಘದ ಅಧ್ಯಕ್ಷ ಎಸ್.ಎಫ್. ಸಿದ್ದನಗೌಡರ, ಇತರರಿದ್ದರು.