ನಿವೃತ್ತಿ ಹೊಂದಿದ ಸಹ ಶಿಕ್ಷಕಿಗೆ ಬೀಳ್ಕೊಡುಗೆ

ಸೇವೆಯಿಂದ ನಿವೃತ್ತಿ ಹೊಂದಿದ ಎಂ.ಎ ಕಾವೇರಿಯಮ್ಮ ಅವರನ್ನು ಶನಿವಾರ ಬೀಳ್ಕೊಡಲಾಯಿತು. ಎ.ಕೆ.ಮನುಮುತ್ತಪ್ಪ, ಮುಕ್ಕಾಟಿರ ಸುತನ್ ಸುಬ್ಬಯ್ಯ, ಚಂಗೇಟೆರ ಅಚ್ಚಯ್ಯ, ನುಚ್ಚುಮಣಿಯಂಡ ಚಿಂಗಪ್ಪ, ಮುಕ್ಕಾಟಿರ ವಿನಯ್ ಇದ್ದರು.
ಸೇವೆಯಿಂದ ನಿವೃತ್ತಿ ಹೊಂದಿದ ಎಂ.ಎ ಕಾವೇರಿಯಮ್ಮ ಅವರನ್ನು ಶನಿವಾರ ಬೀಳ್ಕೊಡಲಾಯಿತು. ಎ.ಕೆ.ಮನುಮುತ್ತಪ್ಪ, ಮುಕ್ಕಾಟಿರ ಸುತನ್ ಸುಬ್ಬಯ್ಯ, ಚಂಗೇಟೆರ ಅಚ್ಚಯ್ಯ, ನುಚ್ಚುಮಣಿಯಂಡ ಚಿಂಗಪ್ಪ, ಮುಕ್ಕಾಟಿರ ವಿನಯ್ ಇದ್ದರು.
Published on

ನಾಪೋಕ್ಲು: ಸಮೀಪದ ಬಲ್ಲಮಾವಟಿ ಗ್ರಾಮದ ನೇತಾಜಿ ಪ್ರೌಢಶಾಲೆಯಲ್ಲಿ 18 ವರ್ಷ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಸಹ ಶಿಕ್ಷಕಿ ಎಂ.ಎ. ಕಾವೇರಿಯಮ್ಮ ಅವರನ್ನು ಶನಿವಾರ ಸನ್ಮಾನಿಸಿ ಬೀಳ್ಕೊಡಲಾಯಿತು.

ಸಂಸ್ಥೆ ಕಾರ್ಯದರ್ಶಿ ಚಂಗೇಟಿರ ಅಚ್ಚಯ್ಯ ಮಾತನಾಡಿ, ಉತ್ತಮ ಪ್ರಜೆಗಳನ್ನು ರೂಪಿಸುವ ಜವಾಬ್ದಾರಿ ಶಿಕ್ಷಕರ ಮೇಲಿದೆ. ಸಮಾಜ ವಿಜ್ಞಾನ ಶಿಕ್ಷಕಿಯಾಗಿ ಕಾವೇರಿಯಮ್ಮ ಉತ್ತಮ ಸೇವಾ ಮನೋಭಾವನೆ ಹೊಂದಿದ್ದರು ಎಂದರು.

ನಿರ್ದೇಶಕ ಮುಕ್ಕಾಟಿರ ವಿನಯ್ ಮಾತನಾಡಿ, ಸಹನೆ, ವಿನಯತೆ, ಸರಳ ಜೀವನ, ಕ್ಷಮಾ ಗುಣ ಕಾವೇರಿಯಮ್ಮ ಅವರಲ್ಲಿ ಇತ್ತು. ಅವರ ನಿವೃತ್ತಿ ಜೀವನ ಸುಖಮಯವಾಗಿರಲಿ ಎಂದು ಹಾರೈಸಿದರು.

ಆಡಳಿತ ಮಂಡಳಿ ಅಧ್ಯಕ್ಷ ಮನು ಮುತ್ತಪ್ಪ ಮಾತನಾಡಿ, ಗ್ರಾಮೀಣ ಪ್ರದೇಶದ ಪ್ರೌಢಶಾಲೆ ಹಲವು ವಿದ್ಯಾರ್ಥಿಗಳನ್ನು ಉತ್ತಮ ಪ್ರಜೆಗಳನ್ನಾಗಿ ರೂಪಿಸಿದೆ. ಉತ್ತಮ ಆಡಳಿತ ಮಂಡಳಿ ಹಾಗೂ ಶಿಕ್ಷಕರಿಂದ ಸಂಸ್ಥೆ ಪ್ರಗತಿ ಕಂಡಿದೆ ಎಂದರು.

ಸಮಾರಂಭದ ಅಧ್ಯಕ್ಷತೆಯನ್ನು ಸಂಸ್ಥೆ ಅಧ್ಯಕ್ಷ ಎ.ಕೆ.ಮನುಮುತ್ತಪ್ಪ ವಹಿಸಿದ್ದರು. ವಿದ್ಯಾಸಂಸ್ಥೆಯ ಆಡಳಿತ ಮಂಡಳಿ ಉಪಾಧ್ಯಕ್ಷ ಮುಕ್ಕಾಟಿರ ಸುತನ್ ಸುಬ್ಬಯ್ಯ, ಕಾರ್ಯದರ್ಶಿ ಚಂಗೇಟೆರ ಅಚ್ಚಯ್ಯ, ಸಂಚಾಲಕ ನುಚ್ಚುಮಣಿಯಂಡ ಚಿಂಗಪ್ಪ, ಕಾವೇರಿಯಮ್ಮ ಪತಿ ಮೂವೇರ ನಾಣಯ್ಯ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net