

ಬಂಟ್ವಾಳ: ಶಿಕ್ಷಣದಿಂದ ಪ್ರಪಂಚ ಬದಲಾಯಿಸಲು ಸಾಧ್ಯ. ಮಕ್ಕಳನ್ನು ಪ್ರಾಥಮಿಕ ಹಂತದಲ್ಲಿ ವೈಯಕ್ತಿಕವಾಗಿ ಹುರಿದುಂಬಿಸಿ ಉತ್ತಮ ಪ್ರಜೆಯನ್ನಾಗಿ ರೂಪಿಸುವ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಜಿಲ್ಲಾಧ್ಯಕ್ಷ ಶಿವಪ್ರಸಾದ್ ಶೆಟ್ಟಿ ಹೇಳಿದರು.
ವೀರಕಂಭ ಗ್ರಾಮದ ಮಜಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹದಿನಾಲ್ಕು ವರ್ಷಗಳಿಂದ ಶಿಕ್ಷಕಿಯಾಗಿ ಸೇವೆ ಸಲ್ಲಿಸಿ ವಯೋನಿವೃತ್ತಿ ಹೊಂದಿದ ಶಿಕ್ಷಕಿ ಶಕುಂತಳಾ ಎಂ.ಬಿ. ಅವರಿಗೆ ಶುಕ್ರವಾರ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಶಿಕ್ಷಕರ ಸಂಘ ವತಿಯಿಂದ ಗೌರವಿಸಿ ಮಾತನಾಡಿದರು.
ವಿಟ್ಲ ಗ್ರಾಮೀಣ ಸಹಕಾರಿ ಬ್ಯಾಂಕ್ ನಿರ್ದೇಶಕ ವಿಶ್ವನಾಥ ಎಂ., ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಅಧ್ಯಕ್ಷ ಜಯರಾಮ, ಪ್ರಧಾನ ಕಾರ್ಯದರ್ಶಿ ಯತೀಶ್, ತಾಲೂಕು ದೈಹಿಕ ಶಿಕ್ಷಕ ಸಂ ಅಧ್ಯಕ್ಷ ರಾಜೇಂದ್ರ ರೈ, ವೀರಕಂಭ ಗ್ರಾಪಂ ಉಪಾಧ್ಯಕ್ಷ ಜನಾರ್ದನ ಪೂಜಾರಿ ಗೋಳಿಮಾರ್, ಶಾಲಾ ಹಿರಿಯ ವಿದ್ಯಾರ್ಥಿ ಸಂಘ ಅಧ್ಯಕ್ಷ ಈಶ್ವರ ಭಟ್ ರಾಕೋಡಿ, ಕಲ್ಲಡ್ಕ ಸಮೂಹ ಸಂಪನ್ಮೂಲ ವ್ಯಕ್ತಿ ಜ್ಯೋತಿ, ಮಜಿ ಶಾಲೆಯಲ್ಲಿ ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ನಾರಾಯಣ ಪೂಜಾರಿ, ಶಕುಂತಳಾ, ನಿವೃತ್ತ ಶಿಕ್ಷಣ ಸಂಯೋಜಕಿ ಪುಷ್ಪಾ, ನಿವೃತ್ತ ಶಿಕ್ಷಕಿ ಸಿಸಿಲಿಯಾ, ಇತರ ಶಾಲೆಯ ಶಿಕ್ಷಕರಾದ ಜೆಸಿಂತಾ, ನೇತ್ರಾವತಿ, ಗೀತಾ, ರೇವತಿ, ಸೇಸಪ್ಪ ನಾಯ್ಕ, ಮಾತೃಶ್ರೀ ಗೆಳೆಯ ಬಳಗ ಅಧ್ಯಕ್ಷ ರಮೇಶ್ ಗೌಡ ಮೈರ ಉಪಸ್ಥಿತರಿದ್ದರು. ಶಿಕ್ಷಕಿಯರಾದ ಅನುಷಾ, ಜಯಲಕ್ಷ್ಮೀ, ಸಂಗೀತ ಶರ್ಮ ಅನಿಸಿಕೆ ವ್ಯಕ್ತಪಡಿಸಿದರು. ಮುಖ್ಯ ಶಿಕ್ಷಕಿ ಬೆನಡಿಕ್ಟಾ ಆಗ್ನೇಸ್ ಮಂಡೋನ್ಸಾ ಸ್ವಾಗತಿಸಿದರು. ಶಿಕ್ಷಕಿ ಮುರ್ಷೀದಾಭಾನು ಸನ್ಮಾನ ಪತ್ರ ವಾಚಿಸಿದರು. ಶಿಕ್ಷಕಿ ಸಂಗೀತ ಶರ್ಮ ಪಿ.ಜಿ. ನಿರೂಪಿಸಿದರು. ಶಿಕ್ಷಕಿ ಸಂಪ್ರಿಯಾ ವಂದಿಸಿದರು.