

ಬಂಟ್ವಾಳ: ಸಾವಿರಾರು ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಲು ಹಗಲು ಇರುಳು ಶ್ರಮಿಸುವ ಶಿಕ್ಷಕ ವೃತ್ತಿ ಪವಿತ್ರವಾಗಿದ್ದು, ದೇಶ ಕಟ್ಟುವಲ್ಲಿ ಮತ್ತು ದೇಶದ ಅಭಿವೃದ್ಧಿಯಲ್ಲಿ ಅವರ ಪಾತ್ರ ಮಹತ್ವದ್ದಾಗಿದೆ ಎಂದು ಟುಡೇ ಫೌಂಡೇಷನ್ ಫರಂಗಿಪೇಟೆ ಇದರ ಅಧ್ಯಕ್ಷ ಉಮರ್ ಫಾರೂಕ್ ಫರಂಗಿಪೇಟೆ ಹೇಳಿದರು.
ದ.ಕ.ಜಿ.ಪಂ.ಮಾ.ಹಿ.ಪ್ರಾ.ಶಾಲೆ ಪುದು ಮಾಪ್ಲ ಇಲ್ಲಿಂದ ವರ್ಗಾವಣೆಗೊಂಡ ಶಿಕ್ಷಕಿ ಸುನೀತಾ ಲವೀನಾ ಡೇಸಾ ಅವರಿಗೆ ಟುಡೇ ಫೌಂಡೇಷನ್ ಫರಂಗಿಪೇಟೆ ಮತ್ತು ಶಾಲೆಯ ಶಿಕ್ಷಕರ ವತಿಯಿಂದ ನಡೆದ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಶಿಕ್ಷಕಿ ಸುನಿತಾ ಲವೀನಾ ಡೇಸಾ ಮಾತನಾಡಿದರು. ಎಸ್.ಡಿ.ಎಂ.ಸಿ. ಅಧ್ಯಕ್ಷ ರಮ್ಲಾನ್, ಉಪಾಧ್ಯಕ್ಷೆ ರುಕ್ಸಾನಾ, ಸದಸ್ಯರಾದ ಹರ್ಷಾದ್, ಸಂಶಾದ್, ಟುಡೇ ಫೌಂಡೇಷನ್ ಸದಸ್ಯ ಅಬ್ದುಲ್ ಮಜೀದ್, ಮಾಜಿ ಮುಖ್ಯಶಿಕ್ಷಕಿ ಶಕುಂತಲಾ ಎಸ್. ಉಳ್ಳಾಲ್ ಮೊದಲಾದವರು ಉಪಸ್ಥಿತರಿದ್ದರು.
ಸಹಶಿಕ್ಷಕಿ ಮಮತಾ ಕೆ. ಸನ್ಮಾನ ಪತ್ರ ವಾಚಿಸಿದರು. ಮುಖ್ಯಶಿಕ್ಷಕಿ ಯಮುನಾ ಸ್ವಾಗತಿಸಿದರು. ಶಿಕ್ಷಕಿ ಐವಿ ಸಿಲ್ವಿಯಾ ಸ್ವಿಕ್ವೇರಾ ಧನ್ಯವಾದಗೈದರು. ಶಿಕ್ಷಕಿ ಶಾಲೆಟ್ ಕ್ರಾಸ್ತಾ ಕಾರ್ಯಕ್ರಮ ನಿರೂಪಿಸಿದರು.