ಕರ್ತವ್ಯ ನಿಷ್ಠೆಯಿಂದ ಜೀವನದಲ್ಲಿ ತೃಪ್ತಿ

1BK2
ಬಸವಕಲ್ಯಾಣದ ಜೆಬಿಕೆ ಪ್ರೌಢಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಮಡಿವಾಳಪ್ಪ ದೇವಪ್ಪ ಅವರನ್ನು ಸನ್ಮಾನಿಸಲಾಯಿತು. ಶ್ರೀ ಡಾ.ಶಿವಾನಂದ ಮಹಾಸ್ವಾಮೀಜಿ, ಶ್ರೀ ಶಿವಾನಂದ ಮಹಾಸ್ವಾಮೀಜಿ ಸಾಯಗಾಂವ, ಶಿವಶಂಕರ ಪಾರಶೆಟ್ಟಿ, ಪ್ರಕಾಶ ಜಾಧವ್, ಹೀರಾಸಿಂಗ್ ಭೋವಿ, ಆದಿನಾಥ ಪೋದಾರ, ಕಾಶೀನಾಥ ವಸ್ತçದ, ವೈಜನಾಥ ಶಾಸ್ತಿç, ನಾಗರಾಜ ಶೀಲವಂತ ಇತರರಿದ್ದರು.
Published on

ಬಸವಕಲ್ಯಾಣ: ಕರ್ತವ್ಯ ನಿಷ್ಠೆಯಿಂದ ಕೆಲಸ ಮಾಡಿದಾಗ ಜೀವನದಲ್ಲಿ ತೃಪ್ತಿ ಕಾಣಲು ಸಾಧ್ಯವಿದೆ ಹುಲಸೂರಿನ ಶ್ರೀ ಡಾ.ಶಿವಾನಂದ ಮಹಾಸ್ವಾಮೀಜಿ ನುಡಿದರು.

ಮಂಗಳವಾರ ನಗರದ ಶ್ರೀ ಜಗದ್ಗುರು ಬಸವಕುಮಾರೇಶ್ವರ (ಜೆಬಿಕೆ) ಪ್ರೌಢಶಾಲೆಯಲ್ಲಿ ಶಿಕ್ಷಕರಾಗಿ ಶೇವೆ ಸಲ್ಲಿಸಿ ನಿವೃತ್ತಿ ಹೊಂದ ಮಡಿವಾಳಪ್ಪ ದೇವಪ್ಪ ರವರ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿದ ಶ್ರೀಗಳು, ಮಡಿವಾಳಪ್ಪ ಅವರು ಸುಮಾರು ೨೦ ವರ್ಷಗಳ ಕಾಲ ಕರ್ತವ್ಯನಿಷ್ಠೆಯಿಂದ ತೃಪ್ತಿಕರ ಸೇವೆ ಸಲ್ಲಿಸಿದ್ದಾರೆ. ಅವರ ಮುಂದಿನ ಜೀವನ ಸುಖಕರವಾಗಲಿ ಎಂದು ಶುಭ ಹಾರೈಸಿದರು.

ಸಾಯಗಾಂವನ ಶ್ರೀ ಶಿವಾನಂದ ಮಹಾಸ್ವಾಮೀಜಿ ಸಮ್ಮುಖ, ಮುಖ್ಯಗುರು ಶಿವಶಂಕರ ಪಾರಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕ ಪ್ರಕಾಶ ಜಾಧವ್ ಮಾತನಾಡಿದರು. ನಿವೃತ್ತ ಶಿಕ್ಷಕ ಮಡಿವಾಳಪ್ಪ ಅವರನ್ನು ಸನ್ಮಾನಿಸಲಾಯಿತು.

ಆದಿನಾಥ ಪೋದಾರ, ಕಾಶೀನಾಥ ವಸ್ತ್ರದ, ವೈಜನಾಥ ಶಾಸ್ತ್ರಿ, ನಾಗರಾಜ ಶೀಲವಂತ, ಮಹೇಶ್ ಮಠಪತಿ, ಅಂಬರೀಷ ಮೇತ್ರೆ, ಶಾಮು ಚವ್ಹಾಣ್, ಸಂಗಮೇಶ ಭೂರೆ, ಶಿವಕುಮಾರ ಪಾಟೀಲ್, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳಳು ಇದ್ದರು. ಶಿಕ್ಷಕ ಹೀರಾಸಿಂಗ್ ಭೋವಿ ಪ್ರಾಸ್ತಾವಿಕ ಮಾತನಾಡಿ, ನಿರೂಪಣೆ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net