ಯೂನಿಯನ್ ಬ್ಯಾಂಕ್ ಮ್ಯಾನೇಜರ್‌ಗೆ ಬೀಳ್ಕೊಡುಗೆ

New Project (21)
Published on

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ

ವರ್ಗಾವಣೆಗೊಂಡಿರುವ ಮಡಂತ್ಯಾರು ಯೂನಿಯನ್ ಬ್ಯಾಂಕಿನ ಮ್ಯಾನೇಜರ್ ಅಶೋಕ್ ಕೋಟ್ಯಾನ್ ಉಡುಪಿ ಅವರಿಗೆ ಬೀಳ್ಕೊಡುಗೆ ಹಾಗೂ ಮಡಂತ್ಯಾರು ಸಹಕಾರಿ ಸಂಘಕ್ಕೆ ಕೇವಲ 11 ಸೆಂಟ್ಸ್ ಜಾಗದಲ್ಲಿ ಅತ್ಯಪೂರ್ವ ಕಟ್ಟಡ ನಿರ್ಮಿಸಿ ಮಾದರಿ ಆಡಳಿತಗಾರನೆನಿಸಿದ ಸಹಕಾರಿ ಸಂಘದ ಅಧ್ಯಕ್ಷ ಅರವಿಂದ ಜೈನ್, ಸಿಇಒ ಜೋಕಿಂ ಡಿಸೋಜ ಅವರಿಗೆ ಸನ್ಮಾನ ಕಾರ್ಯಕ್ರಮ ಮಡಂತ್ಯಾರಿನಲ್ಲಿ ನಡೆಯಿತು.

ಮಾಲಾಡಿ ಗ್ರಾಮದ ಕೊಲ್ಪೆದಬೈಲು ನಿವಾಸಿ ಹಿರಿಯ ಸಾಮಾಜಿಕ ಮುತ್ಸದ್ದಿ ಹಾಜಿ ಅಬ್ದುಲ್ ಲೆತೀಫ್ ಸಾಹೇಬ್ ವೈಯುಕ್ತಿಕ ನೆಲೆಯಲ್ಲಿ ಈ ಕಾರ್ಯಕ್ರಮವನ್ನು ಸಾರ್ವಜನಿಕವಾಗಿ ಹಮ್ಮಿಕೊಂಡಿದ್ದರು.

ಮಡಂತ್ಯಾರು ವರ್ತಕರ ಸಂಘದ ಅಧ್ಯಕ್ಷ ಜಯಂತ ಶೆಟ್ಟಿ, ಮಾಲಾಡಿ ಪಿಡಿಒ ರಾಜಶೇಖರ ಶೆಟ್ಟಿ, ಕರ್ಣಾಟಕ ಬ್ಯಾಂಕ್ ಕೊಲ್ಪೆದಬೈಲು ಶಾಖೆಯ ಮ್ಯಾನೇಜರ್ ಪದ್ಮಪ್ರಸಾದ ಆಳ್ವ, ಮಡಂತ್ಯಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕ ಕುಮಾರ್ ನಾಯ್ಕ, ಡಿಸಿಸಿ ಬ್ಯಾಂಕ್ ಮಡಂತ್ಯಾರು ಶಾಖೆಯ ಮ್ಯಾನೇಜರ್ ಸೌಮ್ಯಾ, ಎಜಿಎಂ ಶೇಖ್ ಇನಾಯತುಲ್ಲಾ, ಅಬ್ದುಲ್ ಲೆತೀಫ್ ಸಾಹೇಬ್ ಅವರ ಸಹೋದರ ಶೇಖ್ ಜವಾಹರ್ ಅಲಿ, ಇಂಜಿನಿಯರ್ ಮುಸ್ತಫಾ, ಜಿ.ಪಂ ಮಾಜಿ ಸದಸ್ಯೆ ತುಳಸಿ ಹಾರಬೆ, ಗಣ್ಯರಾದ ಅನಿಲ್ ಅಧಿಕಾರಿ ಮೊದಲಾದವರು ಉಪಸ್ಥಿತರಿದ್ದರು.

ಸಮಾಜ ಸೇವಕ ಅಬ್ಬೋನು ಮದ್ದಡ್ಕ ಕಾರ್ಯಕ್ರಮ ಸಂಯೋಜಿಸಿದರು. ಸಹಕಾರಿ ಸಂಘದ ಮಾಜಿ ನಿರ್ದೇಶಕ ಅಬ್ದುಲ್ ರಹಿಮಾನ್ ಪಡ್ಪು ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net