ಎಸ್​ಎಸ್​ಎಲ್​ಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ

Mahaveer New
Published on

ಹುಬ್ಬಳ್ಳಿ : ಇಲ್ಲಿನ ಶ್ರೀ ಮಹಾವೀರ ಶಿಕ್ಷಣ ಸಂಸ್ಥೆಯ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಎಸ್​ಎಸ್​ಎಲ್​ಸಿ ವಿಧ್ಯಾರ್ಥಿಗಳ ಬೀಳ್ಕೊಡುವ ಸಮಾರಂಭ ಮಂಗಳವಾರ ಏರ್ಪಡಿಸಲಾಗಿತ್ತು.

ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷ ಎಸ್.ಕೆ. ಆದಪ್ಪನವರ ಮಾತನಾಡಿ, ವಿದ್ಯಾರ್ಥಿಗಳು ಜೀವನದಲ್ಲಿ ನಿರ್ದಿಷ್ಟ ಗುರಿ ಹೊಂದಬೇಕು. ಗುರಿ ಈಡೇರಿಕೆಗೆ ತಕ್ಕ ಪರಿಶ್ರಮ ಪಡಬೇಕು ಎಂದು ಸಲಹೆ ನೀಡಿದರು.

ಅತಿಥಿಯಾಗಿದ್ದ ವಿಜಯವಾಣಿ ದಿನಪತ್ರಿಕೆ ಸ್ಥಾನಿಕ ಸಂಪಾದಕ ಪ್ರಕಾಶ ಶೇಟ್ ಮಾತನಾಡಿ, ಎಸ್​ಎಸ್​ಎಲ್​ಸಿ ಪರೀಕ್ಷೆ ಬಹಳ ಮುಖ್ಯವಾದದ್ದು. ಪರಿಶ್ರಮಪಟ್ಟು ಓದಿ, ಹೆಚ್ಚಿನ ಅಂಕಗಳೊಂದಿಗೆ ಉತ್ತೀರ್ಣರಾಗಬೇಕು. ದುಶ್ಚಟಗಳಿಂದ ದೂರಿ ಇದ್ದು, ಉತ್ತಮ ಆರೋಗ್ಯ ಕಾಯ್ದುಕೊಳ್ಳಬೇಕು ಎಂದು ತಿಳಿಸಿದರು.

ಶಾಲೆಯ ಚೇರ್ಮನ್ ಜಿ.ಜಿ. ಲೋಬೋಗೋಳ, ಆರ್. ಟಿ. ತವನಪ್ಪನವರ ಅತಿಥಿಗಳಾಗಿದ್ದರು.

9ನೇ ತರಗತಿಯ ವಿಧ್ಯಾರ್ಥಿಗಳು 10ನೇ ತರಗತಿಯ ವಿದ್ಯಾರ್ಥಿಗಳಿಗೆ ನೆನಪಿನ ಕಾಣಿಕೆ ಹಾಗೂ ಪರೀಕ್ಷೆ ಬರೆಯಲು ಪೆನ್​ನ್ನು ಹಾಗೂ ಎಕ್ಸಾಮ್ ಪ್ಯಾಡ್ ಅನ್ನು ಕೊಟ್ಟು ಶುಭ ಹಾರೈಸಿದರು.

ಮುಖ್ಯೊಪಾಧ್ಯಾಯರಾದ ಭಾಗ್ಯವತಿ ಭತೂಲಾ, ಶೋಭಾ ಯಾವಗಲ್, ಪಾರ್ವತಿ ಶೀಲವಂತರ, ವಿಶ್ವ ವಿನಾಯಕ ಭಾಗವಹಿಸಿದ್ದರು.

ಶಿಕ್ಷಕ ಸಿಬ್ಬಂದಿ ದೀಪಾ ಪತ್ರಾವಳಿ, ಕಾಂಚನಾ, ರಾಜೇಶ್ವರಿ ವೆರ್ಣೆಕರ, ಅಶ್ವಿತಾ, ಸುಮಾ, ಚಂದ್ರಿಕಾ, ಐಶ್ವರ್ಯ, ರಂಜಿತಾ, ಮೇರಿ, ಸುಧೀರ ಕಡಬಿ, ಮೆಹರ್, ಪದ್ಮಾ, ಸೋಮಪ್ಪ ಜೈನರ, ಬಸಪ್ಪ ಹಬಸಿ, ಪುಷ್ಟಾ, ಜ್ಯೋತಿ ಮುಂತಾದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಕುಮಾರಿ ವರ್ಷಿಣಿ ಸ್ವಾಗತಿಸಿದರು. ಪೂಜಾ ದೇವಾಸಿ ಮತ್ತು ಪ್ರಜ್ವಲ ಭಂಡಾರಿ ನಿರೂಪಿಸಿದರು. ವೈಷ್ಣವಿ ಪಿ. ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net