ವಿದ್ಯಾರ್ಥಿ ಜೀವನ ವ್ಯಕ್ತಿತ್ವ ರೂಪಿಸುವ ಕಾಲಾವಧಿ

YLB 01
ಯಲಬುರ್ಗಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪದವಿ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭ, ಐಕ್ಯೂಎಸಿ ಸೇರಿದಂತೆ ವಿವಿಧ ಘಟಕಗಳ ಸಮಾರೋಪ ಸಮಾರಂಭವನ್ನು ಕೊಪ್ಪಳ ವಿವಿ ಕುಲಪತಿ ಪ್ರೊ.ಬಿ.ಕೆ. ರವಿ ಉದ್ಘಾಟಿಸಿದರು. ಪ್ರಾಚಾರ್ಯ ಕೆ.ಎಚ್.ಛತ್ರದ್, ಉಪನ್ಯಾಸಕರಾದ ಎಚ್.ಎಂ. ಗುಡಿಹಿಂದಿನ, ಡಾ.ಇಬ್ರಾಹಿಂಸಾಬ, ನಂದಾ, ಡಾ.ಶಶಿಕುಮಾರ, ವೀರೇಶ ಎಸ್.ಜಿ, ಮಂಜುಳಾ ಮಡಿವಾಳರ ಇತರರಿದ್ದರು.
Published on

ಯಲಬುರ್ಗಾ: ಜಿಲ್ಲೆಯಲ್ಲಿ ಹಲವಾರು ಐತಿಹಾಸಿಕ ಕುರುವುಗಳಿದ್ದು, ಇತಿಹಾಸದಲ್ಲಿ ತನ್ನದೆ ಆದ ಮಹತ್ವವನ್ನು ನಮ್ಮ ಕೊಪ್ಪಳ ಹೊಂದಿದೆ ಎಂದು ಕೊಪ್ಪಳ ವಿವಿ ಕುಲಪತಿ ಪ್ರೊ.ಬಿ.ಕೆ.ರವಿ ಹೇಳಿದರು.

ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಗುರುವಾರ ಹಮ್ಮಿಕೊಂಡಿದ್ದ 2024-25 ನೇ ಶೈಕ್ಷಣಿಕ ಸಾಲಿನ ಪದವಿ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭ, ಐಕ್ಯೂಎಸಿ ಹಾಗೂ ವಿವಿಧ ಘಟಕಗಳ ಸಮಾರೋಪ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಕ್ಷೇತ್ರ ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಿದೆ. ಕಲ್ಯಾಣ ಕರ್ನಾಟಕದಲ್ಲಿ ಕೊಪ್ಪಳ ಜಿಲ್ಲೆ ತನ್ನದೇ ಆದ ಮಾನ್ಯತೆ ಹೊಂದಿದೆ. ಕೊಪ್ಪಳ ವಿವಿ ವ್ಯಾಪ್ತಿಯಲ್ಲಿ ಯಲಬುರ್ಗಾ ಕಾಲೇಜು ಪ್ರತಿಷ್ಠಿತವಾಗಿದೆ ಎಂದ ಅವರು, ವಿದ್ಯಾರ್ಥಿ ಜೀವನ ವ್ಯಕ್ತಿತ್ವ ರೂಪಿಸುವ ಕಾಲಾವಧಿಯಾಗಿದ್ದು, ಕಾಲಹರಣ ಮಾಡದೇ, ಅಧ್ಯಯನ ಶೀಲರಾಗಿ.

ಆಧುನಿಕ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚಿನ್ನದ ತಟ್ಟೆಗಳಲ್ಲಿ ಅವಕಾಶಗಳಿರಲ್ಲ, ಓದಲೇಬೇಕು, ಓದಿ ಸಾಧನೆ ಮಾಡಬೇಕು. ಕೊಪ್ಪಳ ವಿವಿ ವಿದ್ಯಾರ್ಥಿಗಳು ಕೆ-ಸೆಟ್, ನೆಟ್ ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತಿರುವುದು ಖುಷಿಯ ವಿಚಾರ. ತಂತ್ರಜ್ಞಾನ ಅವಶ್ಯಕತೆಗೆ ತಕ್ಕಂತೆ ಬಳಸಿಕೊಂಡು ಯಶಸ್ಸು ಗಳಿಸಬೇಕು ಎಂದರು.

ಪ್ರಾಚಾರ್ಯ ಕೆ.ಎಚ್.ಛತ್ರದ್, ಉಪನ್ಯಾಸಕರಾದ ಎಚ್.ಎಂ. ಗುಡಿಹಿಂದಿನ, ಡಾ.ಇಬ್ರಾಹಿಂಸಾಬ, ನಂದಾ, ಡಾ.ಶಶಿಕುಮಾರ, ವೀರೇಶ ಎಸ್.ಜಿ, ಮಂಜುಳಾ ಮಡಿವಾಳರ, ವಿನೋದ ಸಿದ್ದಣ್ಣನವರ, ಹನುಮೇಶ, ಲಕ್ಷ್ಮೀಬಾಯಿ, ವಂಶಿಕೃಷ್ಣ, ಬಸವರಾಜ ಹುಲಿ, ಬಸವರಾಜ ಹಾಳಕೇರಿ, ಶಂಕರ ದಿಂಡೂರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net