ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭ

11KMD-1
ಕೆ.ಎಂ.ದೊಡ್ಡಿ ಭಾರತೀ ಸ್ನಾತಕೋತ್ತರ ಮತ್ತು ಸಂಶೋಧನಾ ಕೇಂದ್ರ, ಕನ್ನಡ ವಿಭಾಗದ ಪ್ರಥಮ ಎಂ.ಎ. ವಿದ್ಯಾರ್ಥಿಗಳು ಆಯೋಜಿಸಿದ್ದ ದ್ವಿತೀಯ ಎಂ.ಎ. ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭದಲ್ಲಿ ಸಾಹಿತಿ ಡಾ. ಪ್ರದೀಪ್ ಕುಮಾರ್ ಹೆಬ್ರಿ ಅವರು ಡಾ.ಎಚ್.ಎಂ.ನಾಗೇಶ ರಚಿಸಿರುವ ರಾಗೌ ಅವರ ಜಾನಪದ ಕೃತಿಗಳು ಕ್ಷೇತ್ರ ಕಾರ್ಯ ಮತ್ತು ತಾತ್ವಿಕ ವಿಶ್ಲೇಷಣೆ ಕೃತಿಯನ್ನು ಬಿಡುಗಡೆ ಮಾಡಿದರು.
Published on

ಕೆ.ಎಂ.ದೊಡ್ಡಿ: ಗೊಂಬೆ ಒಂದೇ ತರಹ ಇದ್ದರೂ ಅದರ ಬೆಲೆ 50, 500, 5000 ಇರುತ್ತದೆ. ಹಾಗೆ ನಾವು ಹೆಚ್ಚು ಬೆಲೆ ಬಾಳುವ ತರಹ ಇರಬೇಕೆಂದು ಹಿರಿಯ ಸಾಹಿತಿ ಡಾ. ಪ್ರದೀಪ್ ಹೆಬ್ರಿ ತಿಳಿಸಿದರು.

ಇಲ್ಲಿನ ಭಾರತೀ ಸ್ನಾತಕೋತ್ತರ ಮತ್ತು ಸಂಶೋಧನಾ ಕೇಂದ್ರ, ಕನ್ನಡ ವಿಭಾಗದ ಪ್ರಥಮ ಎಂ.ಎ. ವಿದ್ಯಾರ್ಥಿಗಳು ಆಯೋಜಿಸಿದ್ದ ದ್ವಿತೀಯ ಎಂ.ಎ. ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಬದುಕಿನಲ್ಲಿ ಧ್ಯೇಯ ಇಟ್ಟುಕೊಂಡು ಸವಾಲುಗಳನ್ನು ಸ್ವೀಕರಿಸಬೇಕು. ನಾವು ಹೊರಗಿನ ಕನ್ನಡಿಗಿಂತ ಅಂತರಂಗದ ಕನ್ನಡಿ ಚೆನ್ನಾಗಿರಬೇಕು. ಅಬ್ದುಲ್ ಕಲಾಂ ಅವರ ನುಡಿಯಾದ ಫೇಲ್, ನೋ ಎಂಡ್ ಚಿಂತನೆಗಳನ್ನ ಸ್ವೀಕರಿಸಬೇಕು. ಸ್ವಾಗತದ ಸಂದರ್ಭದಲ್ಲಿ ರೋಜ್ ಕೊಡುವುದು ಸಂಪ್ರದಾಯ. ಆ ರೋಜು 2 ರಿಂದ 3 ಗಂಟೆಗಳ ಕಾಲ ಇರುತ್ತದೆ, ನಂತರ ಬಾಡುತ್ತದೆ. ಆ ಗಳಿಗೆಯಲ್ಲಿ ನಮಗೆ ರೋಜ್ ಆಕರ್ಷಣೆ, ಸುವಾಸನೆ ಬೀರಿ ಮರೆಯಾಗುತ್ತದೆ. ನೆನಪು ಮನದಾಳದಲ್ಲಿ ಇರುತ್ತದೆ. ಹಾಗೆ ಈ ಬೀಳ್ಕೊಡುಗೆ ಸೀಮಿತವಾಗದೆ ಬಾಳಿಗೆ ಕೊಡುಗೆ ಆಗಬೇಕು ಎಂದರು.

ಭಾರತೀ ಕಾಲೇಜಿನ ಪ್ರಾಂಶುಪಾಲ ಪ್ರೊ.ಎಂ.ಎಸ್. ಮಹದೇವಸ್ವಾಮಿ ಮಾತನಾಡಿ, ಭಾಷಾ ಅಧ್ಯಯನ ಮಾಡುವ ವಿದ್ಯಾರ್ಥಿಗಳಿಂದ ಐಚ್ಛಿಕ ಅಧ್ಯಯನ ಮಾಡಿದ ವಿದ್ಯಾರ್ಥಿಗಳು ಬಹಳಷ್ಟು ಭಿನ್ನತೆಯನ್ನು ಕಾಣಬಹುದು ಎಂದು ತಿಳಿಸಿದರು.

ಭಾರತೀ ಸ್ನಾತಕೋತ್ತರ ಮತ್ತು ಸಂಶೋಧನೆ ಕೇಂದ್ರದ ನಿರ್ದೇಶಕ ಪ್ರೊ.ಎಸ್.ನಾಗರಾಜ್ ಮಾತನಾಡಿ, ಜಿ.ಮಾದೇಗೌಡ ಅವರನ್ನು ಸ್ಮರಿಸುತ್ತಾ, ಹೆಚ್ಚಿನ ಶುಲ್ಕ ಪಡೆಯದೆ ಕಡಿಮೆ ಶುಲ್ಕದಲ್ಲಿ ನಿಮಗೆ ಶಿಕ್ಷಣವನ್ನು ನೀಡಲಾಗುತ್ತಿದೆ. ಇದನ್ನು ಸದುಪಯೋಗಪಡಿಸಿಕೊಂಡು ಭವಿಷ್ಯತ್ತಿನ ಕುಸುಮಗಳಾಗಿ ಎಂದು ನುಡಿದರು.

ದ್ವಿತೀಯ ಎಂ.ಎ. ವಿದ್ಯಾರ್ಥಿಗಳಿಗೆ ನೆನಪಿನ ಕಾಣಿಕೆ ನೀಡಲಾಯಿತು. ದ್ವಿತೀಯ ವಿದ್ಯಾರ್ಥಿಗಳು ತಮ್ಮ ಅನುಭವಗಳನ್ನು ಹಂಚಿಕೊಂಡರು. ಸಾಹಿತಿ ಡಾ.ಪ್ರದೀಪ್ ಕುಮಾರ್ ಹೆಬ್ರಿ ಅವರು ಡಾ.ಎಚ್.ಎಂ.ನಾಗೇಶ ರಚಿಸಿರುವ ರಾಗೌ ಅವರ ಜಾನಪದ ಕೃತಿಗಳು ಕ್ಷೇತ್ರ ಕಾರ್ಯ ಮತ್ತು ತಾತ್ವಿಕ ವಿಶ್ಲೇಷಣೆ ಕೃತಿಯನ್ನು ಬಿಡುಗಡೆ ಮಾಡಿದರು. ಡಾ.ಎಚ್.ಎಂ.ನಾಗೇಶ, ಡಾ.ಸಿ.ಮರಯ್ಯ. ಡಾ.ಜಿ.ಎಂ.ಲಕ್ಷ್ಮೀ , ಡಿ.ಎಲ್.ಸರೀತಾ, ಹರೀಶ್, ಕುಮಾರ್, ಗುರುಪ್ರಸದ್ ಸೇರಿದಂತೆ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net